“ಅವಕಾಶ ಕೊಟ್ಟರೆ ಸ್ವಚ್ಛವಾಗಿ ಆಡಳಿತ ನಡೆಸುವೆ, ಕೊಡದಿದ್ದರು ಬೇಸರವಿಲ್ಲ” : ಶಾಸಕ ಎಸ್.ಎ.ರಾಮದಾಸ್ ಮೈಸೂರು,ಜನವರಿ,11,2021(..): ಮುಂದಿನ ಎರಡೂವರೆ ವರ್ಷವೂ ಯಡಿಯೂರಪ್ಪ ಅವರೇ ನಮ್ಮ‌ ಕ್ಯಾಪ್ಟನ್. ಅವರ ತಂಡದಲ್ಲಿ ಯಾರಿರಬೇಕು ಎಂಬುದನ್ನ ಅವರೇ ನಿರ್ಧರಿಸುತ್ತಾರೆ. ಅವಕಾಶ ಕೊಟ್ಟರೆ ಸ್ವಚ್ಛವಾಗಿ ಆಡಳಿತ ನಡೆಸುತ್ತೇನೆ. ಕೊಡದೆ ಇದ್ದರು ಏನು ಬೇಸರವಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.ಸುತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರೇ ನಮ್ಮ ಕ್ಯಾಪ್ಟನ್. ನಾವು ಯಾವುದೇ ನಿರೀಕ್ಷೆ ಆಸೆಗಳನ್ನ ಇಟ್ಟುಕೊಂಡಿಲ್ಲ. ಸಚಿವ ಸ್ಥಾನ ಸಿಕ್ಕರೆ ಹೆಚ್ಚಿನ ಜವಬ್ದಾರಿಯಿಂದ ಕೆಲಸ ಮಾಡುತ್ತೇನೆ. ಸಿಗದೆ ಇದ್ದರು ನಮ್ಮ ಕೆಲಸ ನಾವು ಮಾಡುತ್ತೇವೆ. ಮುಂದಿನ ಎರಡೂವರೆ ವರ್ಷವೂ ಅವರೇ ಸಿಎಂ ಎಂದಿದ್ದಾರೆ. : -- --- - --..