ಕಿರುತೆರೆಗೆ ಎಂಟ್ರಿ ಕೊಟ್ಟ ಯಶ್‌ ತಾಯಿ ಪುಷ್ಪಾ! ಬೆಂಗಳೂರು, ಜನವರಿ 10, 2020 (..):ರಾಕಿಂಗ್ ಸ್ಟಾರ್ ಯಶ್‌ ಅವರ ತಾಯಿ ಪುಷ್ಪಾ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ! ಹೌದು. ‘ಸ್ಟಾರ್‌ ಸುವರ್ಣ’ ವಾಹಿನಿಯ ‘ಬೊಂಬಾಟ್‌ ಭೋಜನ’ ಕಾರ್ಯಕ್ರಮದಲ್ಲಿ ಯಶ್ ತಾಯಿ ಕಾಣಿಸಿಕೊಳ್ಳಲಿದ್ದಾರೆ. ಸಿಹಿ ಕಹಿ ಚಂದ್ರು ಈ ಕಾರ್ಯಕ್ರಮದ ನಿರೂಪಕರು. ಅವರ ಜೊತೆ ಯಶ್()‌ ಬಗ್ಗೆ ಅನೇಕ ವಿಚಾರಗಳನ್ನು ಪುಷ್ಪಾ ಹಂಚಿಕೊಂಡಿದ್ದಾರೆ. (ಜ.8) ಪ್ರಯುಕ್ತ ಈ ಎಪಿಸೋಡ್‌ ಪ್ರಸಾರ ಆಗಿದೆ. ಯಶ್‌ ಮೂಲತಃ ಹಾಸನದವರು. ಅಲ್ಲಿಂದಲೇ ಗಿಣ್ಣದ ಹಾಲನ್ನು ತೆಗೆದುಕೊಂಡು ಬಂದು, ಈ ಕಾರ್ಯಕ್ರಮದಲ್ಲಿ ರುಚಿಯಾದ ಗಿಣ್ಣು ತಯಾರಿಸಿದ್ದಾರೆ ಯಶ್‌ ತಾಯಿ.