“ವಿದೇಶಗಳ ಹಸುಗಳು ಗೋ ಮಾತೆ ಅಲ್ವಾ?” : ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಬೆಂಗಳೂರು,ಜನವರಿ,10,2021(..):ಬೀಫ್ ನಿಷೇಧಿಸಿ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ವ್ಯವಸ್ಥೆ ಜಾರಿಯಲ್ಲಿದೆ. ಹಾಗಿದ್ದರೇ, ವಿದೇಶಗಳ ಹಸುಗಳು ಗೋ ಮಾತೆ ಅಲ್ವಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಮಾಡಿರುವ ಕುರಿತಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ವಾಗ್ದಾಳಿ ನಡೆಸಿದ್ದು, ಸಗಣಿ ಎತ್ತದಿರುವವರು, ಬೆರಣಿ ತಟ್ಟದಿರುವವರು, ಗಂಜಲ ಮುಟ್ಟದಿರುವವರು ಎಷ್ಟು ದಿನ ಗೋ ಪೂಜೆ ಮಾಡ್ತಾರೆ? ಎಂದು ಪ್ರಶ್ನೆ ಮಾಡಿದ್ದಾರೆ. ಹಾಲು ಕರೆಯದಿರುವ ಹಸುಗಳನ್ನು ಏನು ಮಾಡಬೇಕು? ಎಮ್ಮೆ ಕೋಣಗಳನ್ನು ತಿನ್ನಬಹುದು ಎಂದು ಬಿಟ್ಟಿದ್ದಾರೆ. ಹೀಗೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ್ದರಿಂದ ಅವುಗಳನ್ನು ಏನು ಮಾಡಬೇಕು ಎಂಬುದಾಗಿ ಬಿಜೆಪಿಯವರು ಉತ್ತರಿಸಲಿ ಎಂದಿದ್ದಾರೆ. #..ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯನ್ನು ಇಡೀ ದೇಶದಲ್ಲೇ ಜಾರಿಗೆ ತನ್ನಿ, ಕೇರಳದಲ್ಲಿ ಏಕೆ ಬಿಟ್ಟಿದ್ದೀರಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. : --- --