“ನೀವು ಬಸ್ ಸ್ಟ್ಯಾಂಡ್ ನಲ್ಲಿ ಇದ್ದವರು” : ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವಾಗ್ದಾಳಿ ಮೈಸೂರು,ಜನವರಿ,10,2021(..) :ನೀವು ಬಸ್ ಸ್ಟ್ಯಾಂಡ್ ನಲ್ಲಿ ಇದ್ದವರು. ನಿಮ್ಮನ್ನ ಈ ಸ್ಥಾನಕ್ಕೆ ತಂದಿದ್ದು ಕಾಂಗ್ರೆಸ್. ನೀವು ಈ ಲೆವೆಲ್ ಗೆ ಬರೋಕೆ ಏನು ಮಾಡಿದ್ರಿ ಅಂತ ಹೇಳಬೇಕ? ಬಿಡಿಎ ಛೇರ್ಮನ್ ಆಗಿದ್ದಾಗ ನೀವು ಮಾಡಿದ್ದನ್ನ ನಾನು ಹೇಳ್ತೇನೆ. ಸುಮ್ಮನಿದ್ರೆ ಸರಿ ಎಂದು ಸಚಿವ ಎಸ್.ಟಿ.ಸೋಮಶೇಖರ್ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಎಚ್ಚರಿಕೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಎಸ್.ಟಿ.ಎಸ್ ವಾರ್ನಿಂಗ್ ವಿಚಾರವಾಗಿ ಕಿಡಿಕಾರಿ ಅವರು, ಬಿಡಿಎ ಛೇರ್ಮನ್ ಆಗಿದ್ದಾಗ ನೀವು ಮಾಡಿದ್ದನ್ನ ನಾನು ಹೇಳ್ತೇನೆ. ಬನ್ನಿ ಚರ್ಚೆಗೆ ಕುಳಿತುಕೊಳ್ಳಿ ನಿಮ್ಮ‌ ಹಗರಣಗಳನ್ನ ನಾವು ಹೇಳುತ್ತೇವೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. ನೀವು ಮೈಸೂರಿಗೆ ಬಂದಿರೋದು ಅಭಿವೃದ್ಧಿಗಾಗಿ. ಮೈಸೂರಿಗೆ ಬಂದ ಮೇಲೆ‌ ಎಷ್ಟು ಹಣ ತಂದಿದ್ದಿರಿ, ನಿಮ್ಮಿಂದ ಏನೆಲ್ಲ ಅಭಿವೃದ್ಧಿಗಳಾಗಿದೆ ಎಂಬುದರ ಬಗ್ಗೆ ಗಮನ ಕೊಡಿ ಎಂದು ಎಸ್ ಟಿಎಸ್ ಗೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಟಾಂಗ್ ನೀಡಿದ್ದಾರೆ. ಕಲಾಮಂದಿರದ ಬಿಜೆಪಿಯವರು ಕಟ್ಟಿಸಿದ್ದ ? ಬಿಜೆಪಿಯ ಜನಸೇವಕ್ ಕಾರ್ಯಕ್ರಮಕ್ಕೆ ಕಲಾಮಂದಿರದಲ್ಲಿ ಅವಕಾಶ ನೀಡಿರುವುದಕ್ಕೆ ಸಂಬಂಧಿಸಿದಂತೆ ಕಲಾಮಂದಿರವನ್ನ ಹೇಗೆ ರಾಜಕೀಯ ಕಾರ್ಯಕ್ರಮಗಳಿಗೆ ನೀಡುತ್ತಿದ್ದೀರಿ. ಅದೇನು ಬಿಜೆಪಿಯವರು ಕಟ್ಟಿಸಿದ್ದ ಎಂದು ಪ್ರಶ್ನಿಸಿದರು. ಕಲಾಮಂದಿರ ಇರುವಂತದ್ದು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ, ರಾಜಕೀಯ ಪಕ್ಷಗಳ‌ ಕಾರ್ಯಕ್ರಮಗಳಿಗಲ್ಲ. ಕನ್ನಡ ಮತ್ತು‌ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ಅವರ ಮೇಲೆ ಕೇಸ್ ಹಾಕ್ತೇನೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. ಕಲಾಮಂದಿರ ಮುಂದಿನ ದಿನಗಳಲ್ಲಿ ರಾಜಕೀಯ ಕಾರ್ಯಕ್ರಮಗಳ ವೇದಿಕೆಯಾಗಿ ಪರಿವರ್ತನೆಯಾಗುತ್ತೆ. ನಾಳೆ ಬಿಜೆಪಿ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿರುವುದರಿಂದ ಬೇರೆ ಪಕ್ಷಗಳ ಕಾರ್ಯಕ್ರಮಗಳಿಗೂ ಅವಕಾಶ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. : - --..--- --