“ಕಾನೂನು ಮಂತ್ರಿ ಪದವಿ ನೀಡಿರುವುದು ನಾಚಿಕೆಗೇಡು“ : ಸಚಿವ ಜೆ.ಮಾಧುಸ್ವಾಮಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆಕ್ರೋಶ ಮೈಸೂರು,ಜನವರಿ,20,2021(..): ಅಧಿಕಾರಿಗಳ ವಿರುದ್ಧ ಬಾಯಿಗೆ ಬಂದ ಹಾಗೆ ಮಾತನಾಡುತ್ತೀರಿ. ಅಧಿಕಾರಿಯೊಬ್ಬರಿಗೆ ಜಾಡಿಸಿ ಒದಿತಿನಿ ಅಂತೀರಿ. ನಿಮಗೆ ಕಾನೂನು ಮಂತ್ರಿ ಪದವಿ ನೀಡಿರುವುದು ನಾಚಿಕೆಗೇಡು ಎಂದು ಕಾನೂನು ಸಚಿವ ಜೆ.ಮಾಧುಸ್ವಾಮಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆಕ್ರೋಶವ್ಯಕ್ತಪಡಿಸಿದರು.ತುಮಕೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವ ಜೆ.ಮಾಧುಸ್ವಾಮಿ ಅಧಿಕಾರಗಳ ವಿರುದ್ದ ಆವಾಚ್ಯ ಪದ ಬಳಕೆ ವಿಚಾರವಾಗಿ ಭಾನುವಾರ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿ ಕಿಡಿಕಾರಿದರು. ಒಬ್ಬ ಇಂಜಿನಿಯರ್ ಗೆ ಆ ರೀತಿ ಪದ ಬಳಕೆ ಮಾಡುತ್ತೀರಾ? ಅವರು ನಾಲ್ಕು ವರ್ಷಗಳ ಕಾಲ ಇಂಜಿನಿಯರಿಂಗ್ ಓದಿ ಆ ಸ್ಥಾನದಲ್ಲಿ ಕುಳಿತಿರುತ್ತಾರೆ. ಅಧಿಕಾರಿಗಳ ಹೆಂಡತಿಯರ ಮೇಲೆ ಪದಬಳಕೆ ಮಾಡಲು ಯಾರು ಅಧಿಕಾರ ಕೊಟ್ಟಿದ್ದಾರೆ ನಿಮಗೆ? ಸಾರ್ವಜನಿಕರು ಮನವಿ ಕೊಡಲು ಬಂದರೆ ಅವರಿಗೆ ರಾಸ್ಕಲ್ ಎನ್ನುತ್ತೀರಿ ಎಂದು ವಾಗ್ದಾಳಿ ನಡೆಸಿದರು. ನಿಮಗೆ ಕಾನೂನು ಮಂತ್ರಿ ಖಾತೆ ನೀಡಿದ್ದಾರೆ. ಮೊದಲು ಸಾರ್ವಜನಿಕ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಓದಿ ತಿಳಿದುಕೊಳ್ಳಿ. ಮತ್ತೊಮ್ಮೆ ಈ ರೀತಿಯ ನಡವಳಿಕೆ ಪುನರಾವರ್ತನೆ ಆದರೆ ನಿಮ್ಮ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಅಧಿಕಾರಿಗಳಿಗೆ ಗೌರವ ಕೊಟ್ಟು ಮಾತನಾಡುವುದು ಕಲಿಯಿರಿ ಎಂದು ಸಚಿವ ಮಾಧುಸ್ವಾಮಿಗೆ ಎಂ.ಲಕ್ಷ್ಮಣ್ ಎಚ್ಚರಿಕೆ ನೀಡಿದರು. : ----- .----.-