ರಂಗಭೂಮಿ, ಚಲನಚಿತ್ರಗಳ ನಂತರ ವೆಬ್ ಸಿರೀಸ್’ನತ್ತ ಅರುಂಧತಿ ನಾಗ್ ! ಬೆಂಗಳೂರು, ಜನವರಿ 10, 2020 (..):ಹಿರಿಯ ನಟಿ, ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ‘ಎಸ್ಕೇಪ್ ಲೈವ್’ ಎಂಬ ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ. ಈ ವಿಷಯವನ್ನು ಸೀರೀಸ್​ನ ತಂಡ ಅಧಿಕೃತವಾಗಿ ಪ್ರಕಟಿಸಿದೆ. ಎಸ್ಕೇಪ್ ಲೈವ್ ವೆಬ್ ಸರಣಿಯನ್ನು ಸಿದ್ದಾರ್ಥ್ ಕುಮಾರ್ ತಿವಾರಿಯ ಒನ್ ಲೈಫ್ ಸ್ಟೂಡಿಯೋ ನಿರ್ಮಾಣ ಮಾಡುತ್ತಿದೆ. ಜನಪ್ರಿಯ ಲೈವ್-ಸ್ಟ್ರೀಮಿಂಗ್ ಌಪ್ ಒಂದರ ಮುಖಾಂತರ ಐವರು ಜನಸಾಮಾನ್ಯರು ರಾತ್ರೋರಾತ್ರಿ ಖ್ಯಾತಿ ಪಡೆಯಲು ನಡೆಸುವ ಪ್ರಯತ್ನವೇ ಈ ವೆಬ್ ಸೀರೀಸ್​ನ ಕಥಾ ಹಂದರ. ತಮಿಳು ನಟ ಸಿದ್ದಾರ್ಥ್ ಸೂರ್ಯನಾರಾಯಣ್ ತಾಯಿ ಪಾತ್ರದಲ್ಲಿ ಅರುಂಧತಿ ನಾಗ್ ಕಾಣಿಸಿಕೊಳ್ಳಲಿದ್ದಾರೆ.