“ರಿಲಯನ್ಸ್ ಕಂಪನಿ ಬಾಯ್ಕಾಟ್, ಜಿಯೋ ಸಿಮ್ ವಾಪಸ್ “: ರೈತರಿಂದ ವಿನೂತನ ಪ್ರತಿಭಟನೆ ಮೈಸೂರು,ಜನವರಿ,09,2021(..) :ದೆಹಲಿಯ ರೈತ ಪ್ರತಿಭಟನೆ ಹಿನ್ನಲೆ ಜಿಯೋ ಸಿಮ್ ವಾಪಸ್ ಘೋಷಣೆಗಳೊಂದಿಗೆ ಜಿಯೋ ಸಿಮ್ಗೆ ಉಗಿದು ರಿಲಯನ್ಸ್ ಕಂಪನಿಗೆ ಛೀಮಾರಿ ಹಾಕಿ ರೈತರಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಆರು ರಸ್ತೆಯಲ್ಲಿರುವ ಜಿಯೋ ಔಟ್ ಲೆಟ್ ಮುಂದೆ ಅಂಬಾನಿ, ಅದಾನಿ ವಿರುದ್ಧ ರೈತರ ಆಕ್ರೋಶಪಡಿಸಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಅವೈಜ್ಞಾನಿಕ ಕೃಷಿ ಕಾಯ್ದೆ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ. ರಿಲಯನ್ಸ್ ಕಂಪೆನಿಗೆ ಲಾಭ ಮಾಡಿಕೊಡಲು ಕೇಂದ್ರ ಮುಂದಾಗಿದೆ ಎಂದು ಕಿಡಿಕಾರಿದರು. ರಿಲಯನ್ಸ್ ಕಂಪನಿಯನ್ನು ಬಾಯ್ಕಾಟ್ ಮಾಡುತ್ತಿದ್ದೇವೆ. ಜಿಯೋ ಸಿಮ್ ವಾಪಸ್ ಮಾಡಿ ಬೇರೆ ಕಂಪನಿಯ ಸಿಮ್ ಉಪಯೋಗಿಸಲು ಮುಂದಾಗುತ್ತಿದ್ದೇವೆ ಎಂದು ತಿಳಿಸಿದರು. : --------