ನಾಳೆ ಯುಕೆಯಿಂದ ವಿಮಾನ ಆಗಮನ ಹಿನ್ನೆಲೆ: ಏರ್ ಪೋರ್ಟ್ ಗೆ ಭೇಟಿ ನೀಡಿ ಸಚಿವ ಸುಧಾಕರ್ ಪರಿಶೀಲನೆ… ಬೆಂಗಳೂರು,ಜನವರಿ,9,2021(..):ನಾಳೆ ಯುಕೆಯಿಂದ ಮೊದಲ ವಿಮಾನ ಆಗಮಿಸುವ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಭೇಟಿ ನೀಡಿ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ. ನಾಳೆ ಮುಂಜಾನೆ 5 ಗಂಟೆಗೆ ಯುಕೆಯಿಂದ ಬೆಂಗಳೂರಿಗೆ ಮೊದಲ ವಿಮಾನ ಆಗಮಿಸಲಿದ್ದು ಈ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಭೇಟಿ ನೀಡಿ ಸಿದ್ಧತೆ ಪರಿಶೀಲನೆ ನಡಸಿದರು. ಬರುವ ಪ್ರಯಾಣಿಕರಿಗೆ ಟರ್ಮಿನಲ್ ನಲ್ಲಿ ಸ್ಕ್ರೀನಿಂಗ್ ಟೆಸ್ಟಿಂಗ್ ಮಾಡಲಾಗುತ್ತದೆ. ಕೊರೋನಾ ಪಾಸಿಟಿವ್ ಬಂದರೇ ಕ್ವಾರಂಟೈನ್, ನೆಗೆಟಿವ್ ಬಂದರೇ ಹೋಂ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ. ಬ್ರಿಟನ್ ಹೊಸ ಕೊರೋನಾ ರೂಪಾಂತರ ಆತಂಕ ಹಿನ್ನೆಲೆ ಬ್ರಿಟನ್ ನಿಂದ ಭಾರತಕ್ಕೆ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. : - - – - - –- .