ಟೆಸ್ಟ್ ಕ್ರಿಕೆಟ್: ಗಾಯಾಳುಗಳ ಪಟ್ಟಿಗೆ ಹೊಸ ಸೇರ್ಪಡೆ, ರಿಷಬ್ ಪಂತ್ ಔಟ್ ! ಸಿಡ್ನಿ, ಜನವರಿ 09, 2021 (..):ಆಸಿಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಬ್ಯಾಟಿಂಗ್ ವೇಳೆ ರಿಷಬ್ ಪಂತ್ ಗಾಯಗೊಂಡು ಹೊರನಡೆದಿದ್ದಾರೆ. ಪಂತ್ ಅವರ ಎಡ ಮೊಣಕೈಗೆ ಗಾಯವಾಗಿದ್ದು , ಸ್ಕ್ಯಾನ್ ಮಾಡಲು ಆಸ್ಪತ್ರೆಗೆ ರವಾನಿಸಲಾಗಿದೆ. ನೋವು ಶಮನ ಮಾಡುವ ಟ್ಯಾಬ್ಲೆಟ್ ತೆಗೆದುಕೊಂಡು ಬ್ಯಾಟಿಂಗ್ ಮುಂದುವರಿಸಿದ್ದರು . ಆದರೆ ಇದೀಗ ಪಂತ್ ಅಲಭ್ಯರಾಗಿದ್ದಾರೆ. ಇದೀಗ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಆಟಗಾರ ವೃದ್ಧಿಮಾನ್ ಸಹಾ ಹೆಗಲಿಗೆ ಬಿದ್ದಿದೆ.