ಗಲ್ಲಿ ಕ್ರಿಕೆಟ್ ಆಡಿ ಟ್ರೋಲ್ ಪೇಜ್ ಗಳಿಗೆ ಫುಲ್ ಮಿಲ್ಸ್ ಆದ ಅಮೀರ್ ಖಾನ್ ! ಬೆಂಗಳೂರು,ಜನವರಿ09, 2021 (..):ಎಡವಟ್ಟು ಮಾಡಿಕೊಂಡ ಆಮೀರ್‌ ಖಾನ್‌ ಟ್ರೋಲ್ ಪೇಜ್ ಗಳಿಗೆ ಭರ್ಜರಿ ಆಹಾರವಾಗಿದ್ದಾರೆ! ಮಕ್ಕಳ ಜೊತೆ ಆಮೀರ್‌ ಖಾನ್‌ ಗಲ್ಲಿ ಕ್ರಿಕೆಟ್‌ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಕೊರೊನಾ ವೈರಸ್‌ ಹರಡುತ್ತಿರುವ ಈ ಸಂದರ್ಭದಲ್ಲಿ ಅವರು ಅಜಾಗರೂಕತೆ ಪ್ರದರ್ಶಿಸಿದ್ದಾರೆ. ಅವರಿಗೆ ಮಾಸ್ಕ್ ಅಗತ್ಯವಿಲ್ಲವೇ ಎಂದು ಟ್ರೋಲ್ ಪೇಜ್ ಗಳು ಟೀಕಿಸಿವೆ. ‘ಈಗ ಆಮೀರ್‌ಗೆ ಮಾಸ್ಕ್‌ನ ಅವಶ್ಯಕತೆ ಇಲ್ಲವೇ? ಅಣ್ಣಾವ್ರು ಈಗಾಗಲೇ ಲಸಿಕೆ ಹಾಕಿಸಿಕೊಂಡಿದ್ದಾರೆ ಎನಿಸುತ್ತದೆ’ ಎಂದು ಕೆಲವರು ಕಾಲೆಳೆದಿದ್ದಾರೆ.