ಅಪ್ಪ, ಮಗನನ್ನ ಕೊಲೆ ಮಾಡಿದ್ಧ ಮೂವರು ಆರೋಪಿಗಳ ಬಂಧನ… ಮೈಸೂರು,ಜನವರಿ,9,2021(..):ಜೋಡಿ ಕೊಲೆ ಮಾಡಿದ್ಧ ಮೂವರು ಆರೋಪಿಗಳನ್ನ ಮೈಸೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್,ಮಹದೇವಸ್ವಾಮಿ, ಸತೀಶ್ ಬಂಧಿತ ಆರೋಪಿಗಳು. ಮನೆ ಮುಂದೆ ಓಡಾಡುವ ವಿಚಾರಕ್ಕೆ ತಂದೆ ಮಗ ಇಬ್ಬರನ್ನು ಬಂಧಿತ ಮೂವರು ಆರೋಪಿಗಳು ಕೊಲೆಗೈದಿದ್ದರು. ಮಂಡಕಳ್ಳಿ ನಿವಾಸಿಗಳಾದ ಕೋಟೆಗೌಡ ಮತ್ತು ಇವರ ಮಗ ಸತೀಶ್ ಕುಮಾರ್ ನನ್ನ ಹತ್ಯೆ ಮಾಡಿದ್ದರು. ಡಿಸೆಂಬರ್ 26 ರಂದು ಮಗ ಸತೀಶ್ ಕುಮಾರ್ ರನ್ನ ಹಾಗೂ ಜನವರಿ 2 ರಂದು ತಂದೆ ಕೋಟೆಗೌಡರನ್ನ ಕೊಲೆ ಮಾಡಿದ್ದರು. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. : - - - –-