ಕೇವಲ 921 ರೂ.ಗೆ ಮೈಸೂರಿನಿಂದ ಬೆಳಗಾವಿ, ಚೆನ್ನೈ ಪ್ರಯಾಣ: ವಿಶೇಷ ರಿಯಾಯಿತಿ ಘೋಷಣೆ ಮಾಡಿದ ಟ್ರೂಜೆಟ್ ಸಂಸ್ಥೆ… ಮೈಸೂರು,ಜನವರಿ,9,2021(..):ಮೈಸೂರಿನಿಂದ ಬೆಳಗಾವಿ, ಚೆನ್ನೈ ಪ್ರಯಾಣಕ್ಕೆ ಟ್ರೂಜೆಟ್ ಸಂಸ್ಥೆ ವಿಶೇಷ ದರದ ರಿಯಾಯಿತಿ ಘೋಷಣೆ ಮಾಡಿದ್ದು, ಕೇವಲ 921 ರೂ.ಗೆ ವಿಮಾನದಲ್ಲಿ ಮೈಸೂರಿನಿಂದ ಬೆಳಗಾವಿ, ಚೆನ್ನೈಗೆ ಪ್ರಯಾಣ ಮಾಡಬಹುದಾಗಿದೆ. ಹೌದು, ಟ್ರೂಜೆಟ್ ಸಂಸ್ಥೆ ಈ ರಿಯಾಯತಿ ಘೋಷಣೆ ಮಾಡಿದ್ದು, ಇದೇ ತಿಂಗಳ ಜನವರಿ 15ರ ಒಳಗೆ ಮುಂಗಡ ಟಿಕೆಟ್ ಬುಕ್ ಮಾಡಿಕೊಂಡರೆ ಮಾತ್ರ ಈ ವಿಶೇಷ ರಿಯಾಯಿತಿ ಅನ್ವಯವಾಗಲಿದೆ. ಜನವರಿ 9 ರಿಂದ ಅಕ್ಟೋಬರ್ 30 ರವರೆಗೆ ಮೈಸೂರಿನಿಂದ ಬೆಳಗಾವಿ ಮತ್ತು ಚೆನ್ನೈಗೆ 921 ರೂನಲ್ಲಿ‌ ಪ್ರಯಾಣ ಮಾಡಬಹುದು. ಕೇವಲ ಜನವರಿ 15 ರ ಒಳಗೆ ಬುಕ್ ಮಾಡಿದವರಿಗೆ ಮಾತ್ರ ರಿಯಾಯಿತಿ ಅನ್ವಯವಾಗಲಿದೆ. ಈಗ ಸಾಮಾನ್ಯ ದಿನಗಳಲ್ಲಿ ಮೈಸೂರಿನಿಂದ ಬೆಳಗಾವಿಗೆ 1900 ರಿಂದ 2000 ರೂ ಹಾಗೂ ಮೈಸೂರಿನಿಂದ ಚೆನ್ನೈಗೆ 2800 ರಿಂದ 3000 ರೂ ಇರುವ ಟಿಕೆಟ್ ದರ ಇದೆ. ಇನ್ನು ಕೇವಲ 6 ದಿನಗಳಲ್ಲಿ ಬುಕ್ ಮಾಡಿದರೆ ಈ ರಿಯಾಯಿತಿ ಲಭ್ಯವಾಗಲಿದೆ. … .921: , . 09, 2021 (..): .921 . 15. .921 9 30. .1,900 .2,000 .2,800 .3,000 . .: / / : – - - – – - 921- - .