“ಜೆಡಿಎಸ್ ಪಕ್ಷದಿಂದಲೇ ಅಪ್ಪ,ಮಗ ಇಬ್ಬರು ಸ್ಪರ್ಧೆ : ಶಾಸಕ ಸಾ.ರಾ.ಮಹೇಶ್ ಹೇಳಿಕೆ…. ಮೈಸೂರು,ಜನವರಿ,08,2021(..): ಜಿ.ಟಿ.ದೇವೇಗೌಡರೇ ನಮ್ಮ ನಾಯಕರು. ಮುಂದಿನ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರೇ ಮೈಸೂರು ಭಾಗದ ನಾಯಕತ್ವ ವಹಿಸಿಕೊಳ್ಳುತ್ತಾರೆ. ಅವರಷ್ಟೆ ಅಲ್ಲ ಮುಂದಿನ ಚುನಾವಣೆಯಲ್ಲಿ ಅವರ ಮಗನು ಸ್ಪರ್ಧೆ ಮಾಡುತ್ತಾರೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು. ಜೆಡಿಎಸ್ ಪಕ್ಷದಿಂದಲೇ ಅಪ್ಪ ಮಗ ಇಬ್ಬರು ಚುನಾವಣೆಗೆ ನಿಲ್ಲುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಾನು ಹೇಳ್ತಿದ್ದೇನೆ ಅವರು ಜೆಡಿಎಸ್ ಅಲ್ಲೆ ಇರ್ತಾರೆ. ಚುನಾವಣೆಗು ಮುನ್ನ ಭಿನ್ನಾಭಿಪ್ರಾಯ ಇರೋದು ಜೆಡಿಎಸ್‌ನಲ್ಲಿ ಸಹಜವಾಗಿಬಿಟ್ಟಿದೆ. ಮೊದಲಿನಿಂದಲೂ ಅದು ನಡೆದುಕೊಂಡು ಬಂದಿದೆ ಎಂದಿದ್ದಾರೆ. ನಮ್ಮ ಪಾರ್ಟಿ ಇರೋದೆ ಆ ಥರ…! ಚುನಾವಣೆ ಬಂದ ತಕ್ಷಣ ನಾವೆಲ್ಲ ಒಂದಾಗುತ್ತೇವೆ. ಬೇರೆಯವರ ರೀತಿ ಭಿನ್ನಾಭಿಪ್ರಾಯಗಳನ್ನ ಒಳಗಡೆ ಇಟ್ಟುಕೊಳ್ಳಲ್ಲ. ಹೊರಗಡೆ ಮಾತನಾಡಿ ಎಲ್ಲ ಸರಿಪಡಿಸಿಕೊಳ್ಳುತ್ತೇವೆ. ನಮ್ಮ ಪಾರ್ಟಿಯ ಇರೋದೆ ಆ ಥರ. ಜಿ.ಟಿ.ದೇವೇಗೌಡರನ್ನ ಉಚ್ಚಾಟಿಸುತ್ತೇವೆ ಎಂದು ಕುಮಾರಣ್ಣ ಆಗಲಿ ನಾನಾಗಲಿ ಎಲ್ಲಿಯೂ ಹೇಳಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಹಾಯ ಮಾಡಿದವರನ್ನ ಉಚ್ಛಾಟಿಸಬೇಕಲ್ಲವೇ? ಜಿಟಿಡಿ ಸಿಎಂರನ್ನ ಸೋಲಿಸಿದ ದೊಡ್ಡ ರಾಜಕೀಯ ಶಕ್ತಿ. ಅವರನ್ನ ನಾವ್ಯಾಕೆ ಉಚ್ಛಾಟಿಸುತ್ತೇವೆ. ಉಚ್ಛಾಟಿಸುವ ಕೆಲಸ ಜಿಟಿಡಿ ಏನು ಮಾಡಿದ್ದಾರೆ. ಆದರೆ, ಜಿಟಿಡಿ ಹೇಳಿದಂತೆ ಜೆಡಿಎಸ್ ಬಳಸಿಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಹಾಯ ಮಾಡಿದವರನ್ನ ಉಚ್ಛಾಟಿಸಬೇಕಲ್ಲವೇ. ಅದ್ಯಾರು ಆ ರೀತಿ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಅಂತ ಅವರ ಬಳಿಯೇ ಮಾಹಿತಿ ಪಡೆಯುತ್ತೇನೆ ಎಂದು ವ್ಯಂಗ್ಯವಾಗಿ ನುಡಿದಿದ್ದಾರೆ. : ------..- …!