ಟೀಸರ್ ನಲ್ಲೆ ಕಿಡಿ ಹೊತ್ತಿಸಿದ ಕೆಜಿಎಫ್ ಚಾಪ್ಟರ್ 2 ಚಿತ್ರ: ಹತ್ತು ನಿಮಿಷದಲ್ಲಿ 10 ಲಕ್ಷ ಜನರಿಂದ ವೀಕ್ಷಣೆ ….. ಬೆಂಗಳೂರು,ಜನವರಿ,8,2021(..):ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಸಿನಿಮಾ ಟೀಸರ್ ನಲ್ಲಿ ರಾಕಿ ಭಾಯ್ ಯಶ್ ಭರ್ಜರಿ ಎಂಟ್ರಿ ಕೊಟ್ಟಿದ್ದು, ಟೀಸರ್’ಗೆ ಈಗಾಗಲೇ ಭರ್ಜರಿ ರೆಸ್ಪಾನ್ಸ್ ಗಳು ಸಿಗುತ್ತಿದೆ. ಇಂದು ಜನರೆದುರು ಬರಬೇಕಾಗಿದ್ದ ಕೆಜಿಎಫ್ ಚಾಪ್ಟರ್ 2 ಟೀಸರ್ ಹೇಳಿದ್ದಕಿಂತ ಬೇಗನೇ ರಿಲೀಸ್ ಆಗಿದ್ದು, ಹತ್ತು ನಿಮಿಷದಲ್ಲಿ 10 ಲಕ್ಷ ಜನರು ಟೀಸರ್ ವೀಕ್ಷಣೆ ಮಾಡಿದ್ದಾರೆ. ಈ ಮೂಲಕ ಯೂ ಟ್ಯೂಬ್ ನಲ್ಲಿ ರಾಕಿ ಭಾಯ್ ಧೂಳ್ ಎಬ್ಬಿಸುತ್ತಿದ್ದು, ಟೀಸರ್ ನಲ್ಲೆ ಕೆಜಿಎಫ್ ಚಾಪ್ಟರ್ 2 ಚಿತ್ರ ಕಿಡಿ ಹೊತ್ತಿಸಿದೆ. ಕೆಜಿಎಫ್ ಚಾಪ್ಟರ್ 2 ಟೀಸರ್ ಗೆ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಜನವರಿ 8(ಇಂದು) ಯಶ್ ಹುಟ್ಟು ಹಬ್ಬದ ಪ್ರಯುಕ್ತ ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆ ಮಾಡುವುದಾಗಿ ಕೆಜಿಎಫ್ ಚಿತ್ರತಂಡ ತಿಳಿಸಿತ್ತು. ಆದರೆ ತಿಳಿಸಿದ ಮುಂಚೆಯೇ ಟೀಸರ್ ಬಿಡುಗಡೆ ಮಾಡಿದ್ದು ಇದೀಗ ಎಲ್ಲರಿಗೂ ಅಚ್ಚರಿ ತಂದಿದೆ. ಅಷ್ಟೇ ಅಲ್ಲದೆ ಬಿಡುಗಡೆಯಾದ ಕೇವಲ 10 ನಿಮಿಷಗಳ ಅವಧಿಯಲ್ಲಿ 10 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಪ್ರಶಾಂತ್ ನೀಲ್ ಈ ಚಿತ್ರದ ನಿರ್ದೇಶನ ಮಾಡಿದ್ದು, ಇದರಲ್ಲಿ ಯಾವ ರೀತಿಯ ಕಥೆ ಹಾಗೂ ಚಿತ್ರೀಕರಣ ಬಂದಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಅದಕ್ಕೆ ಉತ್ತರವೆಂಬಂತೆ ಈ ಟೀಸರ್ ರಿಲೀಸ್ ಆಗಿದ್ದು ನೋಡುಗರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. …. 2 10 , . 08, 2021 (..): - -2, , . 10 10 . , .: -2/ / 10 / : 2 – - --