ನಾಳೆ ವಿಚಾರಣೆಗೆ ಹಾಜರಾಗುವಂತೆ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್… ಬೆಂಗಳೂರು, ಜನವರಿ,7,2021(..):ವಂಚಕ ಯುವರಾಜ್ ಜತೆ ಹಣಕಾಸು ವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ನಾಳೆ ವಿಚಾರಣೆಗೆ ಹಾಜರಾಗಲು ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ನೀಡಿದೆ. ಆರೋಪಿ ಯುವರಾಜ್‌ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಅವರಿಗೆ ಕೋಟಿ ಕೋಟಿ ಹಣ ವರ್ಗಾವಣೆ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. , ಈ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ವಾಟ್ಸಾಪ್‌ ಮತ್ತು ಟೆಕ್ಸ್ಟ್‌ ಮೆಸೇಜ್‌ ಮೂಲಕ ಅಧಿಕಾರಿಗಳು ನಟಿ ರಾಧಿಕಾಗೆ ನೋಟಿಸ್‌ ಕಳುಹಿಸಿದ್ದಾರೆ ಎನ್ನಲಾಗಿದೆ. ವಂಚನೆ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧಿತ ಯುವರಾಜ್ ಖಾತೆಯಿಂದ ಕೋಟ್ಯಾಂತರ ರೂ ಹಣ ವರ್ಗಾವಣೆಯಾಗಿದೆ ಎಂಬ ಆರೋಪ ನಿನ್ನೆ ಕೇಳಿ ಬಂದಿತ್ತು. ಈ ಸಂಬಂಧ ನಿನ್ನೆಯೇ ಸುದ್ಧಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ, ನಮಗೆ ಯುವರಾಜ್ 15 ವರ್ಷದಿಂದ ಪರಿಚಯ. ಒಂದು ಕೋಟಿ ಹಣ ನೀಡಿಲ್ಲ. 15 ಲಕ್ಷ ಮಾತ್ರ ನೀಡಿದ್ದರು. ಸಿನಿಮಾ ವ್ಯವಹಾರಕ್ಕಾಗಿ ನೀಡಿದ್ದರು ಎಂದು ಹೇಳಿದ್ದರು. : - - – - - .