ಮನೆಯಲ್ಲೇ ರಾಧಿಕಾ ಜತೆ ಹುಟ್ಟುಹಬ್ಬ ಆಚರಿಸಿದ ಯಶ್ ಬೆಂಗಳೂರು, ಜನವರಿ 08, 2021 (..):ನಟ ಯಶ್ ತಮ್ಮ 35ನೇ ವರ್ಷದ ಹುಟ್ಟಹಬ್ಬವನ್ನು ಪತ್ನಿ ರಾಧಿಕಾ ಹಾಗೂ ಇಬ್ಬರು ಮಕ್ಕಳೊಂದಿಗೆ ಸರಳವಾಗಿ ಆಚರಿಸಿದ್ದಾರೆ. ಮನೆಯಲ್ಲಿ ಕೇಕ್ ಕತ್ತರಿಸಿ ಯಶ್ ತಿನ್ನಿಸುತ್ತಿರುವ ಫೋಟೋವನ್ನು ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕೊರೊನಾ ಕಾರಣಕ್ಕೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಯಶ್, ಈ ಮೊದಲೇ ಅಭಿಮಾನಿಗಳು ಮನೆ ಬಳಿಗೆ ಆಗಮಿಸದಂತೆ ಮನವಿ ಮಾಡಿದ್ದರು. ನಟ ಪುನೀತ್ ರಾಜ್‌ಕುಮಾರ್ ಸೇರಿದಂತೆ ಸ್ಯಾಂಡಲ್ ವುಡ್ ನಟರು ಯಶ್ ಗೆ ಶುಭಾಶಯ ಕೋರುವ ಜತೆಗೆ ಟ್ವೀಟ್‌ನಲ್ಲಿ ಕೆಜಿಎಫ್‌ನ ಟೀಸರ್ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.