“ಯಾರಿಗಾಗಿ, ಯಾಕಾಗಿ ಇಂಥ ನಾಟಕದ ಜೀವನ ನಡೆಸ್ತಿದ್ದೀರ” : ಸಿದ್ದರಾಮಯ್ಯಗೆ ಶ್ರೀರಾಮುಲು ಪ್ರಶ್ನೆ…! ಬೆಂಗಳೂರು,ಜನವರಿ,08,2021(..): ದನದ ಮಾಂಸ ತಿಂದಿಲ್ಲ ಅಂತೀರಿ.‌ ಆದ್ರೆ ಯಾವಾಗ್ಲೂ ತಿನ್ನೋ ಮಾತಾಡ್ತೀರಿ? ಯಾರಿಗಾಗಿ, ಯಾಕಾಗಿ ಇಂಥ ನಾಟಕದ ಜೀವನ ನಡೆಸ್ತಿದ್ದೀರ ಎಂದು ಸಿದ್ದರಾಮಯ್ಯ ವಿರುದ್ಧ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಕಿಡಿಕಾಡಿದ್ದಾರೆ. ಇಂಥ ನಡವಳಿಕೆ ಪಕ್ಷ ನಿಮ್ಮನ್ನು ಕಡೆಗಣಿಸುತ್ತಿರುವ ಹತಾಶೆಯಿಂದಲೋ? ಅಥವಾ ಚಾಮುಂಡಿಯಲ್ಲಿ ಸೋತ ದುಃಖದಿಂದಲೋ? ನಿಮ್ಮ ರಾಜಕೀಯ ಜೀವನ ಇಷ್ಟೊಂದು ಅಧಃಪತನಕ್ಕೆ ಇಳಿಯಿತೆಂದು ಯಾರು ಊಹಿಸಿದ್ದರು? ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯನವರು ಬುದ್ಧಿವಂತಿಕೆ‌ ತೋರಿಸಲು ಬಂದಾಗ ವಕೀಲ ಆಗ್ತಾರೆ,‌ ವಿವಾದವಾದಾಗ ಹಳ್ಳಿಹೈದನೂ ಆಗ್ತಾರೆ. ಇವರ ವಿವಾದಗಳೆಲ್ಲವೂ ಮಾಂಸ, ಆಹಾರ, ದೇವರು ಎಂಬಿತ್ಯಾದಿಗಳ ಸುತ್ತವೇ ಸುತ್ತುವುದು, ಇವರೆಷ್ಟು ಬೌದ್ಧಿಕವಾಗಿ ಖಾಲಿಯಾಗಿದ್ದಾರೆ ಎಂಬುದು ತೋರಿಸುತ್ತದೆ. ಜನರು ಮತ್ತು ಪಕ್ಷದಿಂದ ಇವರು ದೂರಾಗುವುದಕ್ಕೆ ಕಾರಣಗಳಿವು ಎಂದು ಟ್ವಿಟರ್ ನಲ್ಲಿ ಟೀಕಿಸಿದ್ದಾರೆ. : ------ …!