ಅಮೇರಿಕಾ ನೂತನ ಅಧ್ಯಕ್ಷರಾಗಿ ಜ.20 ರಂದು ಜೋ ಬೈಡನ್ ಪದಗ್ರಹಣ… ಅಮೇರಿಕಾ,ಜನವರಿ,7,2021(..):ಅಮೇರಿಕಾ ನೂತನ ಅಧ್ಯಕ್ಷರಾಗಿ ಅಧಿಕೃತವಾಗಿ ಜೋ ಬೈಡನ್ ಆಯ್ಕೆಯಾಗಿದ್ದು ಜನವರಿ 20 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಇಂದು ನಡೆದ ಕಾಂಗ್ರೆಸ್‌ ಜಂಟಿ ಅಧಿವೇಶನದಲ್ಲಿ ಜೋ ಬಿಡೆನ್‌ ಅವರನ್ನ ನೂತನ ಅಮೆರಿಕಾದ ಅಧ್ಯಕ್ಷರೆಂದು ಅಧಿಕೃತವಾಗಿ ಘೋಷಸಲಾಗಿದೆ. ಅದರಂತೆ ಜನವರಿ 20ರಂದು ಜೋ ಬಿಡೆನ್‌ ಅಮೆರಿಕಾದ 46ನೇ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಇನ್ನು ಅದೇ ದಿನ ಭಾರತ ಮೂಲದ ಕಮಲ್‌ ಹ್ಯಾರಿಸ್‌ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎಲೆಕ್ಟೋರಲ್ ಕಾಲೇಜ್ ಮತಗಳ ಪೈಕಿ ಜೋ ಬೈಡನ್ ಪರ 306 ಮತಗಳಿದ್ದರೇ, ಡೊನಾಲ್ಡ್ ಟ್ರಂಪ್ ಅವರ ಪರವಾಗಿ 232 ಮತಗಳಿವೆ. ಅಂತಿಮವಾಗಿ ಬೈಡನ್ ಅಧ್ಯಕ್ಷರೆಂದು ಮತ್ತು ಕಮಲಾ ಹ್ಯಾರಿಸ್ ಉಪಾಧ್ಯಕ್ಷರು ಎಂದು ಘೋಷಿಸಲಾಗಿದೆ. ….. : . 20America, . 07, 2021 (..): . 20. , . 46th 20. - - . 306 , 232 . , - -.: / / / 20/ - : – – -