ಮೋದಿ ರೈತರ ಖಾತೆಗೆ ದುಡ್ಡು ಹಾಕಿದ್ರೆ ಮಾತನಾಡ್ತಾರೆ: ಆದ್ರೆ ನಾನು ಸಾಲಮನ್ನಾ ಮಾಡಿದ್ದ ಬಗ್ಗೆ ಮಾತನಾಡಲ್ಲ- ಹೆಚ್.ಡಿ ಕುಮಾರಸ್ವಾಮಿ… ಬೆಂಗಳೂರು,ಜನವರಿ,7,2021(..):ಪ್ರಧಾನಿ ಮೋದಿ ರೈತರ ಖಾತೆಗೆ 2 ಸಾವಿರ ದುಡ್ಡು ಹಾಕಿದರೇ ದೊಡ್ಡದಾಗಿ ಮತನಾಡುತ್ತಾರೆ. ಆದರೇ, ನಾನು ಲಕ್ಷ ಲಕ್ಷ ರೈತರ ಸಾಲಮನ್ನಾ ಮಾಡಿದ್ದೆ. ಆದರ ಬಗ್ಗೆ ಯಾರೂ ಮಾತನಾಡಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, 2006ರಲ್ಲಿ ಹೆಚ್.ಡಿಡಿಗೆ ಮಾತು ಕೇಳದೆ ಅವರಿಗೆ ನೋವುಂಟು ಮಾಡಿ ಬಿಜೆಪಿ ಜತೆ ಕೈಜೋಡಿಸಿದ್ದೆ. ಆಗಲೂ ನನಗೆ ಸಿಎಂ ಆಗುವ ಆಸೆ ಇರಲಿಲ್ಲ. ಈಗ ಬಿಜೆಪಿ ಜತೆ ಜೆಡಿಎಸ್ ವಿಲೀನ ಅಂತಾ ಪ್ರಚಾರವಾಗುತ್ತಿದೆ. ಆದರೆ ಯಾವುದೇ ಪಕ್ಷದ ಜತೆ ಜೆಡಿಎಸ್ ವಿಲೀನ ಇಲ್ಲ. ಸಂಕ್ರಾಂತಿ ಬಳಿಕ ಹೊಸರೀತಿಯಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು. ನಾವು ಬಿಎಸ್‌ವೈ, ಬಿಜೆಪಿ ಬಗ್ಗೆಯೂ ಸಾಫ್ಟ್ ಕಾರ್ನರ್ ಹೊಂದಿಲ್ಲ. ಯಾವುದೇ ರೀತಿಯ ಒಪ್ಪಂದವೂ ಇಲ್ಲ, ವಿಲೀನವೂ ಇಲ್ಲ. ಈ ಸಂದೇಶ ಇಡೀ ರಾಜ್ಯಕ್ಕೆ ಹೋಗಬೇಕು ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. : - - - – -. . .