ಜ.10ರಂದು ದರ್ಶನ್ ಲೈವ್ ಬರ್ತಿರೋದು ಏಕೆ? ಬೆಂಗಳೂರು, ಜನವರಿ 07, 2021 (..): ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನವರಿ 10 ರ ಬೆಳಿಗ್ಗೆ 11 ಗಂಟೆಗೆ ಫೇಸ್ ಬುಕ್ ಲೈವ್ ನಲ್ಲಿ ಬರಲಿದ್ದಾರೆ. ಈ ಕುರಿತು ಟ್ವಿಟರ್ ನಲ್ಲಿ ಟ್ವಿಟ್ ಮಾಡಿರುವ ಡಿ ಕಂಪನಿ ಎಲ್ಲಾ ಕನ್ನಡಾಭಿಮಾನಿಗಳಿಗೆ ಒಂದು ವಿಶೇಷ ಪ್ರಕಟಣೆ ನೀಡುತ್ತಿರುವುದಾಗಿ ತಿಳಿಸಿದೆ. ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರು ಇದೇ ಜನವರಿ 10 ಬೆಳಗ್ಗೆ 11 ಗಂಟೆಗೆ ತಮ್ಮ ಅಲ್ಲಿ ನಿಮ್ಮ ಮುಂದೆ ಲೈವ್ ಬರಲಿದ್ದಾರೆ ಎಂದು ಮಾಹಿತಿ ನೀಡಿದೆ. ಲೈವ್ ನಲ್ಲಿ ದರ್ಶನ್ ‘ರಾಬರ್ಟ್’ ಚಿತ್ರದ ಬಿಡುಗಡೆಗೆ ಸಂಬಂಧಿಸಿದ ಮಾಹಿತಿ ನೀಡಬಹುದು ಎನ್ನಲಾಗಿದೆ.