ನಾಳೆ ನೋಡಿ ಅಧೀರನ ಆರ್ಭಟ ಎಂದ ಸಂಜಯ್ ದತ್ ! ಬೆಂಗಳೂರು, ಜನವರಿ 07, 2021 (..): ಸಂಜಯ್ ದತ್ ಹಂಚಿಕೊಂಡ ಕೆಜಿಎಫ್ 2 ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಂದಹಾಗೆ ಯಶ್ ಜನ್ಮ ದಿನದ ಅಂಗವಾಗಿ ಕೆಜಿಎಫ್ 2 ಟೀಸರ್ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ರಾಕಿ ಭಾಯ್ ಹಾಗೂ ಅಧೀರನ ಮೊದಲ ಲುಕ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಸಂಜಯ್ ದತ್ ಹಂಚಿಕೊಂಡ ಕೆಜಿಎಫ್ 2 ಪೋಸ್ಟರ್ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಈ ಪೋಸ್ಟರ್‌ನಲ್ಲಿ ಅಧೀರನ ಕತ್ತಿ ಹಿಡಿದ ಕೈ ಮಾತ್ರವೇ ಕಾಣುತ್ತಿದೆ. ಬೆರಳಿಗೆ ತೊಟ್ಟಿರುವ ಸಿಂಹದ ಮುಖದ ಉಂಗುರ ಅಧೀರನ ಪಾತ್ರದ ಗುರುತು ಹೇಳುತ್ತಿದೆ.