‘ಕೆ.ಎಸ್ ಈಶ್ವರಪ್ಪ ಸಿಎಂ ಆಗಲಿ’ ಎಂದು ಜೈಕಾರ ಕೂಗಿದ ಕಾಂಗ್ರೆಸ್ ಶಾಸಕ…. ದಾವಣಗೆರೆ,ಜನವರಿ,6,2021(..):ಯಾವುದೇ ಪಕ್ಷದ ಮುಖಂಡರಾಗಲಿ, ಕಾರ್ಯಕರ್ತರಾಗಲಿ, ಶಾಸಕ ಸಚಿವರಾಗಲಿ ತಮ್ಮ ಪಕ್ಷದ ತಮ್ಮ ನಾಯಕ ಸಿಎಂ ಆಗಬೇಕೆಂದು ಬಯಸುವುದು ಸಾಮಾನ್ಯವೇ ಸರಿ. ಆದರೆ ಇಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಬೇರೆ ಪಕ್ಷದ ಶಾಸಕ ಸಿಎಂ ಆಗಲಿ ಎಂದು ಹೇಳಿಕೆ ನೀಡಿದ್ದಾರೆ. ಹೌದು ಸಚಿವ ಕೆ.ಎಸ್ ಈಶ್ವರಪ್ಪ ಸಿಎಂ ಆಗಲಿ ಎಂದು ಹರಿಹರ ಕಾಂಗ್ರೆಸ್ ಶಾಸಕ ರಾಮಪ್ಪ ಜೈಕಾರ ಹಾಕಿದ್ದಾರೆ. ಇಂದು ದಾವಣಗೆರೆ ಬೀರಲಿಂಗೇಶ್ವರ ದೇಗುಲ ಆವರಣದಲ್ಲಿ ನಡೆದ ಕುರುಬ ಸಮುದಾಯದ ಎಸ್ ಟಿ ಮೀಸಲಾತಿ ಹೋರಾಟ ಸಮಾವೇಶದಲ್ಲಿ ಈ ಘೋಷಣೆ ಕೂಗಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಐದು ಕುರುಬ ಶಾಸಕರು ಸರ್ಕಾರ ರಚನೆಗೆ ಶ್ರಮಿಸಿದ್ದಾರೆ. ಹೀಗಾಗಿ ಕೆ.ಎಸ್ ಈಶ್ವರಪ್ಪ ಅವರನ್ನ ಸಿಎಂ ಮಾಡಬೇಕು ಎಂದು ಜೈಕಾರ ಕೂಗಿದರು. ಶಾಸಕ ರಾಮಪ್ಪ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಆಪ್ತರು ಎನ್ನಲಾಗಿದೆ. : - - - - -