ಜೆಡಿಎಸ್ ಸೇರ್ಪಡೆ ಕುರಿತು ಸುಳಿವು ನೀಡಿದ್ರಾ ಸಿಎಂ ಇಬ್ರಾಹಿಂ…. ಬೆಂಗಳೂರು,ಜನವರಿ21,2021(..):ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆಯಾಗುವ ಬಗ್ಗೆ ಸುದ್ಧಿ ಹರಡಿತ್ತು. ಇದೀಗ ಈ ಬಗ್ಗೆ ಸ್ವತಃ ಸಿಎಂ ಇಬ್ರಾಹಿಂ ಅವರೇ ಸುಳಿವು ನೀಡಿದ್ದಾರೆ. ಹೌದು, ಜೆಡಿಎಸ್ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಇಬ್ರಾಹಿಂ, ಜೆಡಿಎಸ್ ಗೆ ಹೋಗಿ ಏನೋ ಆಗಬೇಕು ಎಂದು ಹೋಗುತ್ತಿಲ್ಲ.ನನಗೇನು ಆಗಬೇಕು ಎಂದು ಜೆಡಿಎಸ್ ಗೆ ಹೋಗುತ್ತಿಲ್ಲ. ಜನತಾ ಪರಿವಾರ ಒಗ್ಗೂಡಿಸುವ ಉದ್ದೇಶದಿಂದ ಜೆಡಿಎಸ್ ಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ. ಹಾಗೆಯೇ ಪ್ರಭಾಕರ್ ಕೋರೆ, ಉಮೇಶ್ ಕತ್ತಿ ಭೇಟಿಯಾಗಿದ್ದಾರೆ. ನಮ್ಮ ಟ್ರೈನ್ ಇನ್ನು ಶುರು ಮಾಡಿಲ್ಲ. ಶುರುವಾದ ನಂತರ ಹತ್ತಿಕೊಳ್ಳವವರು ಬಂದು ಹತ್ತಿಕೊಳ್ಳುತ್ತಾರೆ. ನಾವು ಸಾಬ್ರು ಹೊಸಗಾಡಿ ತೆಗೆದುಕೊಳ್ಳುವುದಿಲ್ಲ. ಹಳೆ ಗಾಡಿಯನ್ನೇ ರೆಡಿ ಮಾಡಿಸಿಕೊಳ್ಳುತ್ತೇವೆ ಎಂದು ವ್ಯಂಗ್ಯವಾಡಿದರು. : - - – -