ಬೀಗ ಒಡೆದು ಎರಡು ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ: ನಗದು, ಚಿನ್ನಾಭರಣ ದೋಚಿದ ಖದೀಮರು… ಮೈಸೂರು,ಜನವರಿ,6,2021(..):ಖದೀಮರು ಎರಡು ದೇವಸ್ಥಾನಗಳ ಬೀಗ ಒಡೆದು ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಆದಿಶಕ್ತಿ ಮುತ್ತುತಾಳಮ್ಮ ಮತ್ತು ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಮುತ್ತುತಾಳಮ್ಮ ದೇವಾಲಯದಲ್ಲಿ15 ಗ್ರಾಂ ಚಿನ್ನದ ತಾಳಿ ಮತ್ತು ಗುಂಡು, 250 ಗ್ರಾಂ ಬೆಳ್ಳಿ ಹಾಗೂ ಗೊಲುಕದಲ್ಲಿದ್ದ ಅಂದಾಜು 10 ಸಾವಿರ ನಗದನ್ನ ದೋಚಿದ್ದಾರೆ. ಹಾಗೆಯೇ ವೀರಭದ್ರೇಶ್ವರ ದೇವಾಲಯದಲ್ಲಿ 1500 ಗ್ರಾಂ ಬೆಳ್ಳಿಯ 2 ಬಸವ 1 ಕುದುರೆ 3 ಲಿಂಗದ ಕಾಯಿ ಮತ್ತು ಗೊಲುಕದಲ್ಲಿದ್ದ ಅಂದಾಜು 12 ಸಾವಿರ ರೂಪಾಯಿ ಹಣವನ್ನ ಕಳವು ಮಾಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಕೆ.ಆರ್.ನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. : – - –-