ಸಚಿವ ಸಂಪುಟ ವಿಸ್ತರಣೆ ವಿಚಾರ: ನಾನು ಯಾರಿಗೂ ಭರವಸೆ ಕೊಟ್ಟಿಲ್ಲ ಎಂದ ಸಿಎಂ ಬಿಎಸ್ ವೈ… ಬೆಂಗಳೂರು,ಜನವರಿ,6,2021(..):ಸಚಿವ ಸಂಪುಟ ವಿಸ್ತರಣೆ ಸಂಬಂಧ ನಾನು ಯಾರಿಗೂ ಭರವಸೆ ಕೊಟ್ಟಿಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು. ಸಚಿವ ಸಂಪುಟ ವಿಸ್ತರಣೆ ಸಂಬಂಧ ನಿನ್ನೆ ಯಾರಿಗಾದರೂ ಭರವಸೆ ನೀಡಿದ್ದೀರಾ..? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಬಿಎಸ್ ಯಡಿಯೂರಪ್ಪ ನಾನು ಯಾರಿಗೂ ಭರವಸೆ ಕೊಟ್ಟಿಲ್ಲ. ಈ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಅವರು ಒಪ್ಪಿದರೇ ಯಾರು ಸಚಿವರಾಗಬೇಕೋ ಅವರು ಆಗುತ್ತಾರೆ ಎಂದರು. ಇನ್ನು ಅನುಭವ ಮಂಟಪ ಭೂಮಿ ಪೂಜೆಗೆ ತೆರಳುತ್ತಿದ್ದೇನೆ. 2 ವರ್ಷದಲ್ಲಿ ಅನುಭಮ ಮಂಟಪ ನಿರ್ಮಾಣ ಮುಗಿಸುವ ಆಪೇಕ್ಷೆ ಇದೆ. ಇದು ಮೋದಿ ಅವರ ಆಪೇಕ್ಷೆ ಕೂಡ ಎಂದು ಸಿಎಂ ಬಿಎಸ್ ವೈ ನುಡಿದರು. : - –-