ಶಾಲೆಗಳಲ್ಲಿ ಭಯಪಡುವಷ್ಟು ಶಿಕ್ಷಕರಿಗೆ ಕೊರೋನಾ ಬಂದಿಲ್ಲ: ಆತಂಕ ಬೇಡ- ಸಚಿವ ಸುಧಾಕರ್… ಬೆಂಗಳೂರು,ಜನವರಿ,5,2021(..):ಹಲವು ಶಿಕ್ಷಕರಿಗೆ ಕೊರೋನಾ ಸೋಂಕು ಹಿನ್ನೆಲೆ, ಶಾಲೆಗಳಲ್ಲಿ ಭಯಪಡುವಷ್ಟು ಶಿಕ್ಷಕರಿಗೆ ಕೊರೋನಾ ಬಂದಿಲ್ಲ. ಪೋಷಕರು, ವಿದ್ಯಾರ್ಥಿಗಳಲ್ಲಿ ಆತಂಕ ಬೇಡ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಸುಧಾಕರ್, ಭಯಪಡುವಷ್ಟು ಕೊರೋನಾ ಕೇಸ್ ಬಂದಿಲ್ಲ. ಶಾಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಹೀಗಾಗಿ ಪೋಷಕರು, ವಿದ್ಯಾರ್ಥಿಗಳಲ್ಲಿ ಕೊರೋನಾ ಆತಂಕ ಬೇಡ ಎಂದರು. ಇನ್ನು ಬ್ರಿಟನ್ ನಿಂದ ಬಂದವರು ನಾಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, 75 ಮಂದಿ ಮಾತ್ರ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಈ ಬಗ್ಗೆ ಬಿಬಿಎಂಪಿ ಆಯುಕ್ತರ ಜತೆ ಮಾತನಾಡುತ್ತೇನೆ. ಅವರು ಸಂಪರ್ಕಿತರನ್ನು ಸೇರಿಸಿ ಹೇಳ್ತಿದ್ದಾರೆಯೇ ಎಂಬುದು ಗೊತ್ತಿಲ್ಲ. ಈ ಬಗ್ಗೆ ಚರ್ಚಿಸುತ್ತೇನೆ ಎಂದರು. …. : , , . 05, 2021 (..): “ . ,” . . . , , . . “ 75 , . ’ . ,” .: / / / / . . : - - - – -’ - -.