ದೇಶದಲ್ಲಿ ಇಂದು 20 ಮಂದಿಗೆ ಹೊಸ ಕೊರೋನಾ ರೂಪಾಂತರ ದೃಢ… ನವದೆಹಲಿ.ಜನವರಿ,5,2021(..): ತೀವ್ರ ಆತಂಕಕ್ಕೀಡು ಮಾಡುತ್ತಿರುವ ಬ್ರಿಟನ್ ಹೊಸ ಕೊರೋನಾ ರೂಪಾಂತರ ಭಾರತದಲ್ಲೂ ಹರಡುತ್ತಿದೆ. ಈ ಮಧ್ಯೆ ಇಂದು 20 ಮಂದಿಗೆ ಕೊರೋನಾ ಹೊಸ ಪ್ರಭೇಧದ ಸೋಂಕು ಪತ್ತೆಯಾಗಿದೆ. ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಬ್ರಿಟನ್ ನಿಂದ ಭಾರತಕ್ಕೆ ಬಂದರ ಪೈಕಿ ಇಂದು 20 ಮಂದಿಗೆ ರೂಪಾಂತರಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 58 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ರೂಪಾಂತರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ದೇಶದ ಜನರಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ. ಇನ್ನು ಬೆಂಗಳೂರಿನಲ್ಲೂ ಒಬ್ಬರಿಗೆ ಕೊರೋನಾ ರೂಪಾಂತರ ಪತ್ತೆಯಾಗಿದೆ ಎನ್ನಲಾಗಿದೆ. : – – 20 – - .