”ಮೈಸೂರು ವಿವಿಯಿಂದ 6 ಗ್ರಾಮಗಳ ದತ್ತು ಸ್ವೀಕಾರ’’: ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್…! ಮೈಸೂರು,ಜನವರಿ,04,2021(..): ಮೈಸೂರು ವಿವಿ ಉನ್ನತ ಭಾರತ ಅಭಿಯಾನ ಯೋಜನೆಯಡಿ ಗ್ರಾಮಗಳ ಅಭಿವೃದ್ಧಿ ಉದ್ದೇಶದಿಂದ ಹನೂರು ತಾಲ್ಲೂಕಿನ 6 ಗ್ರಾಪಂ ಗಳಿಂದ 6 ಗ್ರಾಮಗಳನ್ನು ದತ್ತು ಪಡೆದುಕೊಳ್ಳಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು. ಸೋಮವಾರ ಕ್ರಾಫರ್ಡ್ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಪಂನಿಂದ ‘’ಸೇಬಿನ ಕೋಟೆ’’, ಪಿ.ಜಿ.ಪಾಳ್ಯ ಗ್ರಾಪಂದಿಂದ ‘’ಹುಯಿಲ್ನತ್ತ’’, ಎಂ.ಎಂ.ಹಿಲ್ಸ್ ಗ್ರಾಪಂನಿಂದ ‘’ಒಡಕೆಹಳ್ಳ’’, ಪೊನ್ನಾಚಿ ಗ್ರಾಪಂನಿಂದ ‘’ರಾಮೇಗೌಡನ ಹಳ್ಳಿ’’, ಮಿಣ್ಯಂ ಗ್ರಾಪಂ ನಿಂದ ‘’ಸೂಳೆಕೋಬೆ’’, ಹುತ್ತೂರು ಗ್ರಾಪಂ ನಿಂದ ‘’ಗುಳ್ಳದ ಬಯಲು’’ ಗ್ರಾಮ ಸೇರಿದಂತೆ ಒಟ್ಟು 6 ಗ್ರಾಮವನ್ನು ದತ್ತು ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು. ಮೈಸೂರು ವಿವಿಯು ಶತಮಾನೋತ್ಸವ ಆಚರಿಸಿಕೊಂಡಿದ್ದು, ವಿವಿ ವ್ಯಾಪ್ತಿಯಲ್ಲಿ ನೂರು ವರ್ಷಗಳ ಇತಿಹಾಸವನ್ನು ಹೊಂದಿರುವ, ಹಲವು ಸಾಧನೆಗಳನ್ನು ಮಾಡಿರುವಂತಹ ಶಾಲೆಗಳನ್ನು ಗುರುತಿಸಿ ಮತ್ತಷ್ಟು ಬಲವರ್ಧನೆಗೊಳಿಸುವ ಹಾಗೂ ಗುಣಮಟ್ಟದ ಶಿಕ್ಷಣ ಹೆಚ್ಚಿಸುವ ಮೂಲಕ ಮಾದರಿ ಶಾಲೆಗಳನ್ನಾಗಿಸುವ ಉದ್ದೇಶದಿಂದ ಶಾಲೆಗಳನ್ನು ದತ್ತು ಸ್ವೀಕರಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪ್ರಸಾರಾಂಗ ನಿರ್ದೇಶಕ ಪ್ರೊ.ಎನ್.ಎಂ.ತಳವಾರ, ಪ್ರಾಚ್ಯವಿದ್ಯಾ ಸಂಶೋಧನಾಲಯ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಉಪಸ್ಥಿತರಿದ್ದರು. …. ‘ 6 ’: . . , . 04, 2021 (..): . . , - , 6 , , ‘ ’ . ‘ ’ , ‘’ .. , ‘’ .. , ‘ ’ , ‘’ , ‘ ’ .“ . 100 ,” .. . , , , . .. , , , . . , , .: / / / : --6 --.. …!