ಸಕ್ರಾಂತಿಯಂದು ಎಳ್ಳು-ಬೆಲ್ಲದ ಜತೆ ಪ್ರಭಾಸ್ ‘ರಾಧೆ ಶ್ಯಾಮ- ಟೀಸರ್ ಸವಿಯಿರಿ ! ಬೆಂಗಳೂರು,ಜನವರಿ04, 2020 (..):ಪ್ರಭಾಸ್‌ ಅಭಿನಯದ ‘ ರಾಧೆಶ್ಯಾಮ ‘ ಚಿತ್ರದ ಟೀಸರ್ ಜ.14 ಸಂಕ್ರಾಂತಿಯಂದು ಟೀಸರ್ ಬಿಡುಗಡೆ ಮಾಡಲಾಗುತ್ತಿದೆ. ಈ ಮೂಲಕ ಹೊಸ ವರ್ಷದ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ನೀಡಿದೆ ಚಿತ್ರ ತಂಡ. ಈ ಬಗ್ಗೆ ಚಿತ್ರದ ನಿರ್ದೇಶಕ ರಾಧಾಕೃಷ್ಣ ಟೀಸರ್ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಸಂಕ್ರಾತಿಗೆ ಎಳ್ಳು-ಬೆಲ್ಲ ಸವಿಯುತ್ತಾ ರಾಧೆಶ್ಯಾಮ ಟೀಸರ್ ಕಣ್ತುಂಬಿಕೊಳ್ಳಬೇಕಿದೆ.