ಹೆಜ್ಜೇನು ದಾಳಿಗೆ 14 ವರ್ಷದ ಬಾಲಕ ಬಲಿ…. ಬೆಂಗಳೂರು,ಜನವರಿ,4,2021(..):ಹೆಜ್ಜೇನು ದಾಳಿಗೆ 14 ವರ್ಷದ ಬಾಲಕ ಬಲಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. 14 ವರ್ಷದ ಭರತ್ ಹೆಜ್ಜೇನು ದಾಳಿಗೆ ಬಲಿಯಾದ ಬಾಲಕ. ನಿನ್ನೆ ಭರತ್ ಮೈದಾನದಲ್ಲಿ ನಿನ್ನೆ ಕ್ರಿಕೆಟ್ ಆಡುತ್ತಿದ್ದ ವೇಳೆ ಹೆಜ್ಜೇನು ದಾಳಿ ಮಾಡಿತ್ತು. ಈ ವೇಳೆ ಗಾಯಗೊಂಡ ಬಾಲಕನನ್ನ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಬಾಲಕ ಭರತ್ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಮೃತಪಟ್ಟಿದ್ದಾನೆ. : 14 - -- -