ಕಾಡಾನೆ ದಾಳಿ, ಮುಸುಕಿನ ಜೋಳ ಕಾಯುತ್ತಿದ್ದ ರೈತ ಸಾವು…! ಚಾಮರಾಜನಗರ,ಜನವರಿ,03,2021 :ಕಾಡಾನೆ ದಾಳಿಗೆ ರೈತ ಬಲಿಯಾಗಿದ್ದಾರೆ. ಚಾಮರಾಜನಗರ ತಾಲೂಕಿನ ಯಣಗುಂಬ ಗ್ರಾಮದ ರೈತ ಸ್ವಾಮಿ(61)ಮೃತ ದುರ್ದೈವಿ. ಮುಸುಕಿನ ಜೋಳ ಬೆಳೆದಿದ್ದ ರೈತ ಸ್ವಾಮಿ ಕಾಡುಪ್ರಾಣಿ ದಾಳಿಯಿಂದ ಬೆಳೆ ರಕ್ಷಿಸಲು ಶನಿವಾರ ರಾತ್ರಿ ಜಮೀನಿನ ಬಳಿ ಠಿಕಾಣಿ ಹೂಡಿದ್ದರು. ರಾತ್ರಿ 11.30ರ ಸುಮಾರಿನಲ್ಲಿ ಅವರನ್ನ ಕಾಡಾನೆ ತುಳಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. : ------ …!