ಡಿಸಿಎಂ ಜತೆ ತಿರುನಲ್ಲೂರು ಶನೇಶ್ವರ ದೇಗುಲಕ್ಕೆ ಯಶ್ ಭೇಟಿ ಚೆನ್ನೈ, ಜನವರಿ 03, 2020 (..):ರಾಕಿಂಗ್ ಸ್ಟಾರ್ ಯಶ್ ತಮಿಳುನಾಡಿನ ಕಾರೈಕಲ್ ಜಿಲ್ಲೆಯ ತಿರುನಲ್ಲೂರಿನಲ್ಲಿರುವ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಹೌದು. ಕೆಜಿಎಫ್-2 ಚಿತ್ರೀಕರಣದ ಬಿಡುವಿನ ವೇಳೆ ತಿರುನಲ್ಲೂರು ದೇವಸ್ಥಾನಕ್ಕೆ ಯಶ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ವಿಶೇಷ ಎಂದರೆ ರಾಕಿಂಗ್ ಸ್ಟಾರ್ ಯಶ್ ಜೊತೆ ಡಿಸಿಎಂ ಅಶ್ವತ್ಥ ನಾರಾಯಣ್ ಕೂಡ ದೇವಾಲಯಕ್ಕೆ ಭೇಟಿ ನೀಡಿದ್ದರು.