ವಾಷಿಂಗ್ ಮೆಷಿನ್ ರಿಪೇರಿ ಹೆಸರಲ್ಲಿ ಕಳ್ಳತನ : ಆರೋಪಿ ಬಂಧನ…! ನೆಲಮಂಗಲ,ಜನವರಿ,02,2021(..): ಫ್ರಿಡ್ಜ್, ವಾಷಿಂಗ್ ಮೆಷಿನ್ ರಿಪೇರಿ ಮಾಡುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ದಾಸರಹಳ್ಳಿ ಸಮೀಪದ ಶೆಟ್ಟಿಹಳ್ಳಿಯ ಫ್ಯಾಷನ್ ಡಿಸೈನರ್ ಸಂಧ್ಯಾಮನೆಯಲ್ಲಿ ಡಿಸೆಂಬರ್ 25ರಂದು ಕಳ್ಳತನ ಮಾಡಿದ್ದ ಆರೋಪಿ ಸುಮನ್ ಅಲಿಯಾಸ್ ಫ್ರಿಡ್ಜ್ ಸುಮನ್(20)ನನ್ನು ಪೊಲೀಸರು ತಮ್ಮ ಕಾರ್ಯಾಚರಣೆ ವೇಳೆ ಬಂಧಿಸಲಾಗಿದೆ. ಈತನಿಂದ 10 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬಾಗಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : --- --- …!