ಬಾಲ್ಯದ ಗೆಳೆಯನ ಅಂತಿಮ ದರ್ಶನ ಪಡೆದ ಮಾಜಿ ಸಿಎಂ ಸಿದ್ಧರಾಮಯ್ಯ… ಮೈಸೂರು,ಜನವರಿ,2,2021(..):ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಇಂದು ಮೃತಪಟ್ಟ ತನ್ನ ಬಾಲ್ಯದ ಗೆಳೆಯ ಮೈಸೂರಿನ ಕುಪ್ಪೆಗಾಲದ ಪುಟ್ಟಸ್ವಾಮಿಗೌಡ(75)ರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಮೈಸೂರಿನ ಕುಪ್ಪೆಗಾಲದ ಪುಟ್ಟಸ್ವಾಮಿಗೌಡ(75) ನಿಧನರಾದ ಹಿನ್ನೆಲೆ ಅಲ್ಲಿಗೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ತನ್ನ ಬಾಲ್ಯದ ಗೆಳೆಯ ಪುಟ್ಟಸ್ವಾಮಿಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಪುಟ್ಟಸ್ವಾಮಿಗೌಡ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ನಂತರ ಅಂತ್ಯಕ್ರಿಯೆ ಮುಗಿಯುವವರಿಗೆ ಸ್ಥಳದಲ್ಲಿಯೇ ಇದ್ದ ಸಿದ್ಧರಾಮಯ್ಯ ಬಳಿಕ ಬೆಂಗಳೂರಿಗೆ ತೆರಳಿದರು. : –- –-- –