ಅಪ್ಪನಾದ ಖುಷಿಯಲ್ಲಿದ್ದಾರೆ ಉಮೇಶ್ ಯಾದವ್ ಬೆಂಗಳೂರು, ಜನವರಿ 02, 2021 (..):ಟೀಂ ಇಂಡಿಯಾ ಕ್ರಿಕೆಟ್ ತಂಡದ ವೇಗಿ ಉಮೇಶ್​ ಯಾದವ್ ಅಪ್ಪನಾದ ಖುಷಿಯಲ್ಲಿದ್ದಾರೆ. ಹೌದು. ಉಮೇಶ್​ ಯಾದವ್ ಅವರ ಪತ್ನಿ ತಾನ್ಯಾ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಉಮೇಶ್ ಯಾದವ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದು, ‘ನನ್ನ ಮನೆಗೆ ರಾಜಕುಮಾರಿ ಬಂದಿದ್ದಾಳೆ’ ಎಂದು ಬರೆದುಕೊಂಡಿದ್ದಾರೆ. ಉಮೇಶ್ ಯಾದವ್ ಅವರನ್ನು ಬಿಸಿಸಿಐ ತಮ್ಮ ಟ್ವಿಟರ್​ ಖಾತೆಯಲ್ಲಿ ಅಭಿನಂದಿಸಿದ್ದಾರೆ.