ನಾನ್ ವೆಜ್’ಗೆ ಎಂದ ರಮ್ಯಾ ! ಬೆಂಗಳೂರು, ಜನವರಿ 02, 2021 (..): ಹೊಸ ವರ್ಷದಿಂದ ಮಾಂಸ ತಿನ್ನುವುದನ್ನು ತ್ಯಜಿಸಲಿದ್ದೇನೆ ಎಂದಿದ್ದಾರೆ ಮಾಜಿ ಸಂಸದೆ, ನಟಿ ರಮ್ಯಾ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದು, ವಿಡಿಯೋ ಒಂದನ್ನು ಶೇರ್​ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ರಮ್ಯಾ ಇತ್ತೀಚೆಗೆ ತುಂಬಾ ಆಯಕ್ಟಿವ್ ಆಗಿದ್ದಾರೆ. ಅಲ್ಲದೆ ಹೊಸ ಹೊಸ ವಿಷಯಗಳನ್ನು ಶೇರ್​ ಮಾಡುತ್ತ ಅಭಿಮಾನಿಗಳಿಗೆ ಖುಷಿ ನೀಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದು, ವಿಡಿಯೋ ಒಂದನ್ನು ಶೇರ್​ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​​ ಮಾಡಿರುವ ನಟಿ, ‘ಈ ವರ್ಷದ ಆರಂಭದಲ್ಲಿ ನಾನು ಸಸ್ಯಾಹಾರಿಯಾಗಿ ಬದಲಾಗಿದ್ದೇನೆ. ಇದು ನಾನು ತೆಗೆದುಕೊಂಡ ಉತ್ತಮ ನಿರ್ಧಾರ ಎಂದಿದ್ದಾರೆ.