ನವಜಾತ ಹೆಣ್ಣು ಶಿಶುವನ್ನು ತಿಪ್ಪೆಗುಂಡಿಗೆ ಎಸೆದ ಪಾಪಿಗಳು…! ಕೋಲಾರ,ಜನವರಿ,02,2021(..): ಹೆಣ್ಣು ಶಿಶು ಹುಟ್ಟಿದೆ ಎಂಬ ಒಂದೇ ಕಾರಣಕ್ಕೆ ನವಜಾತ ಶಿಶುವನ್ನು ಪಾಪಿಗಳು ತಿಪ್ಪೆಗುಂಡಿಯಲ್ಲಿ ಎಸೆದಿರುವ ಹೀನ ಕೃತ್ಯ ನಡೆದಿದೆ.ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಹೆಣ್ಣು ಶಿಶು ಹುಟ್ಟಿದೆ ಎಂಬ ಒಂದೇ ಕಾರಣಕ್ಕೆ ಪಾಪಿಗಳು ತಿಪ್ಪೆಗುಂಡಿಗೆ ಬಿಸಾಡಿ ಹೋಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.ಇತ್ತ ಮಗು ಅಳುತ್ತಿದ್ದ ಶಬ್ದ ಕೇಳಿದ ಗ್ರಾಮಸ್ಥರು ಶಿಶುವನ್ನು ರಕ್ಷಿಸಿದ್ದಾರೆ. ನಂತರ ಸ್ಥಳೀಯ ಆಶಾ ಕಾರ್ಯಕರ್ತೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ ಹೆಣ್ಣು ಶಿಶುವಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು. : ----- …!