ರಾಜ್ಯದಲ್ಲಿ ಕೊರೋನಾ ವ್ಯಾಕ್ಸಿನ್ ಡ್ರೈ ರನ್ ಆರಂಭ… ಬೆಂಗಳೂರು,ಜನವರಿ,2,2020(..):ಕೋವಿಡ್ -19 ಸೋಂಕಿಗೆ ಲಸಿಕೆ ನೀಡುವ ಪ್ರಾಯೋಗಿಕ ಕಾರ್ಯಕ್ರಮ – ಕೊರೋನಾ ಡ್ರೈ ರನ್ ಇಂದಿನಿಂದ ದೇಶಾದ್ಯಂತ ಆರಂಭವಾಗಿದ್ದು, ರಾಜ್ಯದಲ್ಲಿ ಇಂದು 5 ಜಿಲ್ಲೆಗಳಲ್ಲಿ ಕೋವಿಡ್-19 ಲಸಿಕೆ ಅಣಕು ಕಾರ್ಯಾಚರಣೆ ನಡೆಯುತ್ತಿದೆ. ರಾಜ್ಯದ ಮೈಸೂರು, ಬೆಂಗಳೂರು,ಕಲ್ಬುರ್ಗಿ, ಶಿವಮೊಗ್ಗ, ಬೆಳಗಾವಿ ಈ 5 ಜಿಲ್ಲೆಗಳ 15 ಕೇಂದ್ರಗಳಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ಹಲವು ಕಡೆಗಳಲ್ಲಿ ಕೊರೋನಾ ವ್ಯಾಕ್ಸಿನ್ ಡ್ರೈರನ್ ಆರಂಭವಾಗಿದೆ. ಬೆಳಗಾವಿಯ ವಂಟಮೂರಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿವಮೊಗ್ಗ ನಗರದ ಮೆಡಿಕಲ್ ಕಾಲೇಜು, ಕಲ್ಬುರ್ಗಿಯ ಅಶೋಕನಗರ ಆರೋಗ್ಯಕೇಂದ್ರದಲ್ಲಿ ಡ್ರೈ ರನ್ ಆರಂಭವಾಗಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ಕೋವಿಡ್-19 ಲಸಿಕೆ ಅಣಕು ಕಾರ್ಯಾಚರಣೆಗೆ ಬಿಬಿಎಂಪಿ ವಿಶೇಷ ಆಯುಕ್ತ ರಾಜೇಂದ್ರ ಜೋಳನ್ ಚಾಲನೆ ನೀಡಿದರು. ಇನ್ನು ಮೈಸೂರು ಜಿಲ್ಲೆಯ ಜಯನಗರ ಆಸ್ಪತ್ರೆ, ಹುಣಸೂರು ತಾಲ್ಲೂಕು ಬಿಳಿಕೆರೆ ಆರೋಗ್ಯ ಕೇಂದ್ರ, ಕೆ.ಆರ್ ನಗರ ತಾಲ್ಲೂಕು ಆಸ್ಪತ್ರೆಯನ್ನ ಕೊರೋನಾ ವ್ಯಾಕ್ಸಿನ್ ಡ್ರೈನ್ ರನ್ ಕಾರ್ಯಚರಣೆಗೆ ಆಯ್ಕೆ ಮಾಡಲಾಗಿದೆ. : - - – . , . 02, 2021 (..): -19 . -19 5 . ( ) 15 , , , , . , , . -19 , . , , .. .: -10 / /