ದೇಶದಲ್ಲಿ ಇಳಿಕೆಯತ್ತ ಕೊರೋನಾ ಪ್ರಕರಣ: ಒಂದೇ ದಿನ ಹೊಸದಾಗಿ 19,078 ಮಂದಿಯಲ್ಲಿ ಸೋಂಕು ಪತ್ತೆ… ನವದೆಹಲಿ,ಜನವರಿ,2,2020(..):ದೇಶದಲ್ಲಿ ಕೊರೊನಾ ಮಹಾಮಾರಿಯ ಆರ್ಭಟ ಇಳಿಕೆಯಾಗುತ್ತಿದ್ದು ದೇಶದಲ್ಲಿ ಕಳೆದ 24 ಗಂಟೆತಲ್ಲಿ 19,078 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,03,05,788ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 224 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 1,49,218ಕ್ಕೆ ತಲುಪಿದೆ. ಇನ್ನು 1,03,05,788 ಮಂದಿ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 22,926 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈ ವರೆಗೂ ಗುಣಮುಖರಾದವರ ಸಂಖ್ಯೆ 99,06,387ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿತರಿಗಿಂತ ಗುಣಮುಖರಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣ ಸಂಖ್ಯೆ 2,50,183ಕ್ಕೆ ಇಳಿಕೆಯಾಗಿದೆ. : - – -19,078 - – - .