ರಾಜ್ಯದ 5 ಜಿಲ್ಲೆಗಳಲ್ಲಿ ನಾಳೆಯಿಂದ ಕೋವಿಡ್ ವ್ಯಾಕ್ಸಿನ್ ಡ್ರೈ ರನ್- ಸಚಿವ ಡಾ.ಕೆ. ಸುಧಾಕರ್ ಬೆಂಗಳೂರು,ಜನವರಿ,1,2021(..): ನಾಳೆಯಿಂದ ರಾಜ್ಯದ ಐದು ಜಿಲ್ಲೆಗಳಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ನಡೆಯಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ಇಂದು ಮಾಹಿತಿ ನೀಡಿದ ಸಚಿವ ಸುಧಾಕರ್, ಕರ್ನಾಟಕದ 5 ಜಿಲ್ಲೆಗಳನ್ನು ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಗೆ ಆಯ್ಕೆ‌ ಮಾಡಲಾಗಿದೆ. ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಡ್ರೈ ರನ್ ನಡೆಯಲಿದೆ. ಆ ಜಿಲ್ಲೆಯ ಜಿಲ್ಲಾ ಕೇಂದ್ರ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈ ರನ್ ನಡೆಯಲಿದೆ. ಇನ್ನು ಲಸಿಕೆ ಬಂದ ತಕ್ಷಣ ರಾಜ್ಯದ ಜನರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು. ವ್ಯಾಕ್ಸಿನ್ ನೀಡುವಾಗ ಅನುಸರಿಸಬೇಕಾದ ಹಂತಗಳ ಕುರಿತು ಡ್ರೈ ರನ್ ನಡೆಸಲಾಗುತ್ತಿದೆ. ವ್ಯಾಕ್ಸಿನ್ ಹಾಕುವುದನ್ನು ಬಿಟ್ಟು ಉಳಿದೆಲ್ಲ ಹಂತಗಳನ್ನು ಯಾವ ರೀತಿ‌ ನಿಭಾಯಿಸಬೇಕು ಎಂಬುದನ್ನು ಡ್ರೈ ರನ್ ನಲ್ಲಿ ಪಾಲಿಸಲಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದರು. … 5 – . . , . 01, 2020 (..): . . . , , , , , , . . . , , .: / . . / : - - -5 – --.