‘’ನಿರಾಶ್ರಿತರಿಗೆ ಹೂದಿಕೆ ವಿತರಿಸಿ’’ ಹೊಸ ವರ್ಷಕ್ಕೆ ಸ್ವಾಗತ…! ಮೈಸೂರು,ಜನವರಿ,01,2020(..): ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ರಸ್ತೆ ಬದಿ ನಿರಾಶ್ರಿತರಿಗೆ ಹೂದಿಕೆ ವಿತರಿಸುವ ಮೂಲಕ ಹೊಸ ವರ್ಷವನ್ನು ವಿಶೇಷವಾಗಿ ಸ್ವಾಗತಿಸಿದ್ದಾರೆ.ಗೌರಿಶಂಕರ ನಗರ ಹಾಗೂ ರಮಾಬಾಯಿ ನಗರ ಸುತ್ತಮುತ್ತ ಫುಟ್ಬಾತ್ ಹಾಗೂ ಲಾರಿ ಕೆಳಗಡೆ ಜೀವನ ಸಾಗಿಸುತ್ತಿರುವ ನಿರಾಶ್ರಿತರಿಗೆ ಸ್ಥಳಕ್ಕೆ ತೆರಳಿ ಸುಮಾರು 50 ಕ್ಕೂ ಹೆಚ್ಚು ನಿರಾಶ್ರಿತರಿಗೆ ಹೊದಿಕೆ ನೀಡಿ ಮಾನವೀಯತೆ ಮೆರೆದಿದ್ದಾರೆ.ಅಭಿಯಾನಕ್ಕೆ ಬಿಜೆಪಿ ಹಿಂದುಳಿದ ವರ್ಗದ ಮೈಸೂರು ನಗರ ಅಧ್ಯಕ್ಷ ಜೋಗಿ ಮಂಜು ,ಕರುಣಾಮಯಿ ವಿಷ್ಣು ಅಭಿಮಾನಿ ಬಳಗ ಎಸ್.ಎನ್.ರಾಜೇಶ್, ದುರ್ಗಾ ಪ್ರಸಾದ್, ರಾಕೇಶ್ ಕುಂಚಿಟಿಗ, ಹರೀಶ್ ನಾಯ್ಡು, ದೀಪಕ್ ,ದುರ್ಗಾ ಪ್ರಸಾದ್ ಇತರರು ಕೈ ಜೋಡಿಸಿದ್ದಾರೆ. : ---- …