ಎರಡುವರೆ ವರ್ಷ ನಾನೇ ಸಿಎಂ ಎಂಬ ಹೇಳಿಕೆ: ಬಿಎಸ್ ವೈ ಹೇಳಿಕೆ ಬೇರೆ ಅರ್ಥ ಕೊಡುವಂತಿದೆ- ಕೆಪಿಸಿಸಿ ಡಿ.ಕೆ ಶಿವಕುಮಾರ್… ಬೆಂಗಳೂರು,ಜನವರಿ,1,2021(..):ಎರಡುವರೆ ವರ್ಷ ನಾನೇ ಸಿಎಂ ಎಂಬ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ಬೇರೆ ಅರ್ಥಕೊಡುವಂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದರು. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಬಿಎಸ್ ಯಡಿಯೂರಪ್ಪ ನಾನೇ ಎರಡುವರೆ ವರ್ಷ ಸಿಎಂ ಎಂದಿದ್ದಾರೆ. ಬಿಎಸ್ ವೈಗೆ ಭಯ ಕಾಡುತ್ತಿದೆ. ಬಿಎಸ್ ವೈ ಅವರೇ ಸಿಎಂ, ಅವರು ಸಿಎಂ ಅಲ್ಲ ಅಂತಾ ಯಾರು ಹೇಳಿಲ್ಲ. ಆದರೂ ಎರಡುವರೆ ವರ್ಷ ನಾನೇ ಸಿಎಂ ಎಂದು ಹೇಳಿಕೆ ನೀಡುತ್ತಿರುವುದು ಬೇರೆ ಅರ್ಥ ಕೊಡುವಂತಿದೆ ಎಂದರು. ಹೊಸ ಕೊರೋನಾ ಪ್ರಬೇಧ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಸರ್ಕಾರಕ್ಕೆ ಬೇಸಿಕ್ ಕಾಮನ್ ಸೆನ್ಸ್ ಇರಬೇಕಿತ್ತು. ಏರ್ ಪೋರ್ಟ್ ನಲ್ಲೇ ಟೆಸ್ಟ್ ಮಾಡಿಸಬೇಕಿತ್ತು. ಈಗ ಅವರೇ ಜನರ ಆತಂಕಕ್ಕೆ ಕಾರಣರಾಗಿದ್ದಾರೆ. ಆಡಳಿತ ವಿಚಾರದಲ್ಲಿ ಬಿಜೆಪಿ ಸರ್ಕಾರ ಫೆಲ್ಯೂರ್ ಆಗಿದೆ. ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರೇ ಸಮಸ್ಯೆಯಾಗುತ್ತಿರಲಿಲ್ಲ ಎಂದು ಟೀಕಿಸಿದರು. : – - - - - .