‘’ಥಮ್ಸ್ ಅಪ್’’ ಮಾಡಿ ಸ್ವಾಗತ ಕೋರಿದ ಶಾಸಕ : ವಿದ್ಯಾರ್ಥಿಗಳಿಗೆ ಸಂತಸ…! ಮಂಡ್ಯ,ಜನವರಿ,01,2021(..): ಕೊರೊನಾದ ಮುಂಜಾಗ್ರತಾ ಕ್ರಮಗಳ ಜೊತೆ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳತ್ತ ಮುಖ ಮಾಡಿದ್ದಾರೆ. ಶಾಲಾ-ಕಾಲೇಜುಗಳಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡಿ, ಥಮ್ಸ್ ಅಪ್ ಮಾಡುವ ಮೂಲಕ ಶಾಸಕ ಸಿ.ಎಸ್.ಪುಟ್ಟರಾಜು ತರಗತಿಗೆ ಬರಮಾಡಿಕೊಂಡಿದ್ದಾರೆ.ಕೊರೊನಾದಿಂದ ರಾಜ್ಯಾದ್ಯಂತ ಮುಚ್ಚಲ್ಪಟ್ಟ ಶಾಲಾ-ಕಾಲೇಜುಗಳು 10 ತಿಂಗಳು ಬಳಿಕ ಇಂದು ಮತ್ತೆ ತೆರೆಯುತ್ತಿವೆ. ಶಾಸಕ ಪುಟ್ಟರಾಜು ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದಲ್ಲಿರೊ ಸರ್ಕಾರಿ ದಪವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡಿ ಆದರದಿಂದ ಸ್ವಾಗತಿಸಿದ್ದಾರೆ. ಶಾಸಕರ ಸ್ವಾಗತಕ್ಕೆ ವಿದ್ಯಾರ್ಥಿಗಳು ಖುಷಿಯಾಗಿದ್ದಾರೆ. ಹತ್ತು ತಿಂಗಳ ನಂತರ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದು, ತಮ್ಮ ಸ್ನೇಹಿತರನ್ನು ಕೊಠಡಿ, ಶಿಕ್ಷಕರನ್ನು ನೋಡಿ ಸಂತಸಗೊಂಡಿದ್ದಾರೆ. ಗುರುಗಳಿಗೆ ಹೊಸ ವರ್ಷದ ಶುಭಾಶಯಗಳು ವಿನಿಮಯ ಮಾಡಿಕೊಂಡಿದ್ದಾರೆ. : ----- …!