ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಇಬ್ಬರ ಬಂಧನ: 1.26 ಕೆ.ಜಿ ಚಿನ್ನ ವಶಕ್ಕೆ… ಮಂಗಳೂರು,ಡಿಸೆಂಬರ್,31,2020(..):ಕಾನೂನುಬಾಹಿರವಾಗಿ ಚಿನ್ನವನ್ನು ಸಾಗಿಸುತ್ತಿದ್ದ ಇಬ್ಬರನ್ನ ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ 1.26 ಕೆ.ಜಿ ಚಿನ್ನ ವಶಕ್ಕೆ ಪಡೆದಿದ್ದಾರೆ. ಮೊಹಮ್ಮದ್ ಜಹೀರ್ ಅನೀಜ್ ಹಾಗೂ ವಸಿಂ ಮರ್ಜನ್ ಬಂಧಿತರು, ಇವರು ದುಬೈನಿಂದ ಮಂಗಳೂರು ಅಂತರರಾಷ್ಟಿಂಯ ವಿಮಾನ ನಿಲ್ದಾಣಕ್ಕೆ ಬಂದಿದ್ದದ್ದರು. ಈ ಇಬ್ಬರು ಗುದದ್ವಾರದಲ್ಲಿ ಅಂದಾಜು ರೂ.೬೪,೧೩,೪೦೦ ಮೌಲ್ಯದ ೧.೨೬ ಕೆಜಿಗಳಷ್ಟು ಚಿನ್ನವನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ಅನುಮಾನಾಸ್ಪದವಾಗಿ ಕಂಡು ಬಂದ ಮೇರೆಗೆ ಈ ಇಬ್ಬರನ್ನು ತಡೆದು ತಪಾಸಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. ಡಾ. ಕಪಿಲ್ ಗಡ್ಗೆ, ಐಆರ್‌ಎಸ್, ಉಪ ಆಯುಕ್ತರ ಮುಂದಾಳತ್ವದಲ್ಲಿ ನಡೆದಂತಹ ಈ ಕಾರ್ಯಾಚರಣೆಯ ತಂಡದ ಶ್ರೀಕಾಂತ್ ಕೆ, ಸೂಪರಿಂಟೆಂಡೆಂಟ್, ಬಿಕ್ರಂ ಚಕ್ರಬರ್ತಿ, ಸೂಪರಿಂಟೆಂಡೆಂಟ್, ಪ್ರಫುಲ್ ಮಿಠಲ್, ಇನ್ಸ್ಪೆಕ್ಟರ್ ಹಾಗೂ ಇತರರನ್ನು, ಶ್ರೀ ಇಮಾಮುದ್ದಿನ್ ಅಹ್ಮದ್, ಕಸ್ಟಮ್ಸ್ ಆಯುಕ್ತರು, ಶ್ರೀ ಜೊನೆಸ್ ಜಾರ್ಜ್, ಐಆರ್‌ಎಸ್ ಹಾಘೂ ಜಂಟಿ ಆಯುಕ್ತರು ಇವರು ಶ್ಲಾಘಿಸಿದ್ದಾರೆ. … , 2 , . . ; 1814 30.12.2020. , 1.26 64,13,400 . , , , . , , ., , ; . : – - -2 --