ಬಿಜೆಪಿ ಎಂಬ ರೈಲು ಮಿಸ್ ಮಾಡಿಕೊಂಡರೇ ಜೆಡಿಎಸ್ ಗೆ ನಷ್ಟ- ಸಚಿವ ಡಾ.ಕೆ. ಸುಧಾಕರ್ .. ಬೆಂಗಳೂರು,ಡಿಸೆಂಬರ್,31,2020(..):ಕಾಂಗ್ರೆಸ್ ಸಹವಾಸದಿಂದ ಜೆಡಿಎಸ್ ಬೇಸತ್ತು ಹೋಗಿದೆ. ಹೀಗಾಗಿ ಇನ್ಮುಂದೆ ಕಾಂಗ್ರೆಸ್ ಜತೆ ಜೆಡಿಎಸ್ ಹೋಗಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಕಾಂಗ್ರೆಸ್ ಸಹವಾಸ ಮಾಡಿ ಜೆಡಿಎಸ್ ಅವನತಿಯತ್ತ ಸಾಗಿದೆ. ಇನ್ಮುಂದೆ ಜೆಡಿಎಸ್ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದರು. ಬಿಜೆಪಿ ಪಕ್ಷ ಎಂಬ ರೈಲಿನ ಜತೆ ಜೆಡಿಎಸ್ ಗುರುತಿಸಿಕೊಂಡರೇ ಒಳ್ಳೆಯದು. ದೆಹಲಿ ಸೇರಬಹುದು. ಇಲ್ಲವಾದರೇ ಹಳ್ಳಿಯಲ್ಲೇ ಉಳಿಯಬೇಕಾದಿತು. ಬಿಜೆಪಿ ರೈಲು ಮಿಸ್ ಮಾಡಿಕೊಂಡರೇ ಜೆಡಿಎಸ್ ಗೆ ನಷ್ಟವಾಗಲಿದೆ ಎಂದು ಸಚಿವ ಸುಧಾಕರ್ ತಿಳಿಸಿದರು. : - - - – -