ಕೊರೋನಾ ರೂಪಾಂತರ ವೈರಸ್ ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆ… ನವದೆಹಲಿ,ಡಿಸೆಂಬರ್,31,2020(..):ಕೊರೊನಾ ರೂಪಾಂತರಿ ವೈರಸ್ ಸೋಂಕು ತೀವ್ರ ಆತಂಕ ಉಂಟು ಮಾಡಿದ್ದು ಈ ನಡುವೆ ದೇಶದಲ್ಲಿ ಇಂದು ಹೊಸದಾಗಿ 5 ಮಂದಿಗೆ ಕೊರೋನಾ ಹೊಸ ಪ್ರಭೇದ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ. ಪುಣೆಯ ಎನ್‌ಐವಿ ಲ್ಯಾಬ್ ನಲ್ಲಿ 4 ಪ್ರಕರಣಗಳು, ಐಜಿಐಬಿ ಲ್ಯಾಬ್ ನಲ್ಲಿ ಒಂದು ಪ್ರಕರಣ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈ ಮೂಲಕ ಭಾರತದಲ್ಲಿ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ. ಇನ್ನ ಕರ್ನಾಟಕದಲ್ಲಿ ಇಂದು ಯಾವುದೇ ರೂಪಾಂತರ ಕೊರೋನಾ ಪ್ರಕರಣಗಳು ಪತ್ತೆಯಾಗಿಲ್ಲ. : - - - – 25