ಗ್ರಾ.ಪಂ ಚುನಾವಣೆ: ನಿವೃತ್ತ ನ್ಯಾಯಮೂರ್ತಿ ಸೊಸೆ ಗೆಲುವು… ಮೈಸೂರು,ಡಿಸೆಂಬರ್,30,2020(..): ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಈ ಮಧ್ಯೆ ನಿವೃತ್ತ ನ್ಯಾಯಮೂರ್ತಿಯ ಸೊಸೆಯೊಬ್ಬರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಹೌದು, ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ದಿ. ಎನ್ ಎಸ್ ವೀರಭದ್ರಯ್ಯ ಅವರ ಸೊಸೆ ರೇಷ್ಮಾ ಹರೀಶ್ ಅವರು ನಂಜನಗೂಡು ತಾಲೂಕಿನ ನೇರಳೆ ಗ್ರಾಮದ ವಾರ್ಡ್ 3ರಲ್ಲಿ ಚುನಾವಣೆಗೆ ನಿಂತಿದ್ದರು. ಇಂದು ಫಲಿತಾಂಶ ಪ್ರಕಟಗೊಂಡಿದ್ದು, ರೇಷ್ಮಾ ಹರೀಶ್ 316ಮತಗಳನ್ನು ಪಡೆದು ಈ ಮೂಲಕ ಗೆಲುವು ದಾಖಲಿಸಿದ್ದಾರೆ. : - – -