ಆಧಾರ ರಹಿತ ಸುದ್ದಿ ನಿಲ್ಲಿಸಿ: ನ್ಯೂಸ್ ಚಾನೆಲ್ ಗಳಿಗೆ ಚುನಾವಣಾ ಆಯೋಗದ ವಾರ್ನಿಂಗ್….. ಬೆಂಗಳೂರು,ಡಿಸೆಂಬರ್,30,2020(..): ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳುತ್ತಿದೆ. ಈ ನಡುವೆ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶವನ್ನ ರಾಜಕೀಯ ಪಕ್ಷಗಳ ಆಧಾರಿತ ಚುನಾವಣೆಯಂತೆ ಪ್ರಸಾರ ಮಾಡುತ್ತಿರುವುದನ್ನ ನಿಲ್ಲಿಸುವಂತೆ ದೃಶ್ಯ/ಶ್ರವಣ/ ಪತ್ರಿಕಾ ಮಾಧ್ಯಮಗಳಿಗೆ ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಚುನಾವಣಾ ಆಯೋಗ, ಇಂದು ಗ್ರಾಮ ಪಂಚಾಯಿತಿ ಚುನಾವಣಾ ಮತ ಎಣಿಕೆ ನಡೆಯುತ್ತಿದೆ. ಈ ಚುನಾವಣೆ ಪಕ್ಷ ರಹಿತವಾಗಿದೆ. ಆದರೆ ಕೆಲವು ಟಿವಿ ವಾಹಿನಿಗಳಲ್ಲಿ ರಾಜಕೀಯ ಪಕ್ಷಗಳ ಆಧಾರಿತ ಚುನಾವಣೆಯಂತೆ ಪ್ರಸಾರ ಮಾಡಲಾಗುತ್ತಿದೆ. ಇದರಿಂದಾಗಿ ಜನರಿಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಅದ್ದರಿಂದ ಈ ರೀತಿ ಆಧಾರವಿಲ್ಲದೇ ಫಲಿತಾಂಶವನ್ನು ಪಕ್ಷವಾರು ಪ್ರಸಾರ ಮಾಡಬಾರದು ಎಂದು ದೃಶ್ಯ/ಶ್ರವಣ/ ಪತ್ರಿಕಾ ಮಾಧ್ಯಮಗಳಿಗೆ ನಿರ್ದೇಶನ ನೀಡುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಮನವಿ ಮಾಡಿದ್ದಾರೆ. : –- - - -