ಮುಂದಿನ ದಿನಗಳಲ್ಲಿ ಮೈಸೂರಿನಿಂದ ದೇಶದ ಮತ್ತಷ್ಟು ನಗರಗಳಿಗೆ ವಿಮಾನ ಹಾರಾಟ- ಸಂಸದ ಪ್ರತಾಪ್ ಸಿಂಹ… ಮೈಸೂರು,ಡಿಸೆಂಬರ್,30,2020(..):ಮೈಸೂರು ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮುಂಬರುವ ದಿನಗಳಲ್ಲಿ ದೇಶದ ಮತ್ತಷ್ಟು ನಗರಗಳಿಗೆ ವಿಮಾನಗಳ ಹಾರಾಟ ಆರಂಭಿಸಲಾಗುವುದು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮುಂಬರುವ ದಿನಗಳಲ್ಲಿ ತಿರುಪತಿ, ಶಿರಡಿ, ಕೊಯಮತ್ತೂರು, ಅಹಮದಾಬಾದ್, ದೆಹಲಿ, ಮುಂಬೈ ಮಹಾನಗರಕ್ಕೆ ಮೈಸೂರಿನಿಂದ ವಿಮಾನಗಳ ಹಾರಾಟ ಆರಂಭಿಸುವ ಗುರಿಯಿದೆ. ಆದರೆ ಮೈಸೂರು ವಿಮಾನ ನಿಲ್ದಾಣದಲ್ಲಿ ಈಗ ಇರುವ ರನ್ ವೇ ಮತ್ತಷ್ಟು ವಿಮಾನಗಳ ಹಾರಾಟಕ್ಕೆ ಸಾಕಾಗುವುದಿಲ್ಲ. ಹಾಗಾಗಿ ರನ್ ವೇ ವಿಸ್ತರಣೆ ಮಾಡಿದ ನಂತರ ಮಾತ್ರವೇ ಈ ಎಲ್ಲಾ ಪ್ರಮುಖ ನಗರಗಳಿಗೆ ಮೈಸೂರಿನಿಂದ ವಿಮಾನಗಳ ಹಾರಾಟ ಸಾಧ್ಯವಾಗಲಿದೆ ಈಗಾಗಲೇ ಹಾರಾಟ ನಡೆಸುತ್ತಿರುವ ವಿಮಾನಗಳಿಗೆ ಮೈಸೂರಿನ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಗೋವಾಗೆ ತೆರಳುವ ವಿಮಾನದಲ್ಲಿ ನೂರಕ್ಕೆ ನೂರರಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. ಬೇರೆ ಉದ್ದೇಶವಿಟ್ಟುಕೊಂಡು ರೈತರ ವೇಷ ಹಾಕಿಕೊಂಡಿದ್ದರೆ ಏನೂ ಪ್ರಯೋಜನವಾಗುವುದಿಲ್ಲ… ಕೇಂದ್ರದ ಜೊತೆ ಮಾತುಕತೆಗೆ ಮುಂದಾಗದೆ ದೆಹಲಿಯಲ್ಲಿ ಪ್ರತಿಭಟನಾನಿರತ ರೈತರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ರೈತರ ಹಿತದೃಷ್ಟಿಯಿಂದ ಯಾರಾದರೂ ಹೋರಾಟಕ್ಕೆ ಕುಳಿತಿದ್ದರೆ ಮಾತುಕತೆ ಫಲಪ್ರದವಾಗುತ್ತದೆ. ಬೇರೆ ಉದ್ದೇಶವಿಟ್ಟುಕೊಂಡು ರೈತರ ವೇಷ ಹಾಕಿಕೊಂಡಿದ್ದರೆ ಏನೂ ಪ್ರಯೋಜನವಾಗುವುದಿಲ್ಲ. ಎಂಎಸ್ಪಿ, ಎಪಿಎಂಸಿ ಕಾಯ್ದೆ ಸೇರಿದಂತೆ ಕೃಷಿ ಕಾಯಿದೆ ತಿದ್ದುಪಡಿಗಳು ರೈತರ ಪರವಾಗಿಯೇ ಇದೆ ಎಂದು ತಿಳಿಸಿದರು. …. – , . 30, 2020 (..): - , . , , , , , . , ’ , , . ’ . , , .: / / : – – – - --