ಕಿರುತೆರೆಗೆ ಸುಧಾರಾಣಿ ಎಂಟ್ರಿ ! ಬೆಂಗಳೂರು,ಡಿಸೆಂಬರ್,30,2020(..):ಖ್ಯಾತ ನಟಿ ಸುಧಾರಾಣಿ ಕಿರುತೆರೆಗೆ ಕಾಲಿಟ್ಟಿದ್ದಾರೆ! ಹೌದು. ನಟಿ ಸುಧಾರಾಣಿ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಇವರೊಂದಿಗೆ ನಟ ವಿಜಯ್ ಸೂರ್ಯ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಜೀ ಕನ್ನಡದ ‘ಜೊತೆ ಜೊತೆಯಲಿ’ ಧಾರವಾಹಿಯಲ್ಲಿ ಸುಧಾರಾಣಿ ಕಾಣಿಸಿಕೊಂಡಿದ್ದಾರೆ. ವಿಶಿಷ್ಟ ಕಥೆಯುಳ್ಳ ಈ ಧಾರಾವಾಹಿ ಮೊದಲ ಕಂತಿನಿಂದಲೇ ವೀಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಸದ್ಯ ‘ಜೊತೆ ಜೊತೆಯಲಿ’ ಇದೀಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ.